ಹಳ್ಳಿ ಫೈಟ್​ನಲ್ಲಿ ಕುಡುಕರ ರಂಪಾಟ: ಡಿಸಿ ಕಾರಿನ ಮುಂದೆಯೇ ನಿದ್ರೆ... ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಹರಿದರು!

gp drunk
Published on

ಚಾಮರಾಜನಗರ/ ಗಂಗಾವತಿ: 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಾಣೆಯ ಮತದಾನದ ವೇಳೆ ಕುಡುಕರ ಕಿತಾಪತಿಗೆ ಅಧಿಕಾರಿಗಳು ಹೈರಾಣಾದ ಪತ್ಯೇಕ ಘಟನೆ ಇಂದು(ಭಾನುವಾರ) ಸಂಭವಿಸಿದೆ.

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮತಚಲಾಯಿಸಿ ಮತಗಟ್ಟೆಯಿಂದ ಹೊರ ಬಂದು ರಸ್ತೆಯಲ್ಲಿ ಮಲಗಿ ರಂಪಾಟ ನಡೆಸುತ್ತಿದ್ದ. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಚಾಮರಾಜನಗರ ಜಿಲ್ಲಾಧಿಕಾರಿ ಅವರ ವಾಹನದ ಮುಂದೆ ಮಲಗಿ ಮತ ಚಲಾಯಿಸಬೇಕು ಎಂದು ರಂಪಾಟ ನಡೆಸಿದ. ಕೂಡಲೇ ಪೊಲೀಸರು ಕುಡುಕನನ್ನು ಎಳೆದು ಮನೆಯೊಂದರ ಪಕ್ಕದಲ್ಲಿ ಮಲಗಿಸಿದರು. ಇಷ್ಟಕ್ಕೆ ಸುಮ್ಮನಾಗದ ಪಾನಮತ್ತ ವ್ಯಕ್ತಿ ರಂಪಾಟ ಹೆಚ್ಚು ಮಾಡಿದ. ಕೊನೆಗೆ ಗ್ರಾಮಸ್ಥರು ಆತನನ್ನು ಹೊತ್ತೊಯ್ದರು. ಇದನ್ನೂ ಓದಿರಿ ಮತದಾನಕ್ಕೆ ಕರೆದೊಯ್ಯುತ್ತಿದ್ದ ಕಾರು ಪಲ್ಟಿ, 11 ಜನರ ಸ್ಥಿತಿ ಗಂಭೀರ

ಮತಪತ್ರ ಹರಿದು ಹಾಕಿದ ಕುಡುಕರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಪಂ‌ ಚುನಾವಣೆ ವಾರ್ಡ್ ಸಂಖ್ಯೆ 1 ಮತ್ತು 3ರ ಮತಗಟ್ಟೆಯಲ್ಲಿ ಮದ್ಯ ಸೇವಿಸಿ ಆಗಮಿಸಿದ್ದ ಇಬ್ಬರು ಮತದಾರರು ಮತ ಚಲಾವಣೆಯ ನಂತರ‌ ಬ್ಯಾಲೆಟ್ ಪೇಪರ್ ಹರಿದು ಹಾಕಿದ್ದಾರೆ. ಇದರಿಂದ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಭೇಟಿ ನೀಡಿ ಪರಿಶೀಲಿಸಿದರು. ತಿಮ್ಮಪ್ಪ ಮತ್ತು ನಂದಕುಮಾರ್ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net