

ಹಾವೇರಿ: ಗ್ರಾಪಂ ಸ್ವಚ್ಛವಾಹಿನಿ ಆಟೋ ಚಾಲಕರು ಹಾಗೂ ಸಹಾಯಕಿಯರಾಗಿ ಕೆಲಸ ಮಾಡಲು ತರಬೇತಿ ಪಡೆದಿರುವ ಎಲ್ಲರಿಗೂ ತಕ್ಷಣ ಕೆಲಸ, ವೇತನ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಗ್ರಾಪಂ ಸ್ವಚ್ಛವಾಹಿನಿ ನೌಕರರ ಸಂಘಟನೆ ವತಿಯಿಂದ ನ. 28ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ಸ್ವಚ್ಛವಾಹಿನಿಯಡಿ ಈಗಾಗಲೇ ಕೆಲಸ ಮಾಡುತ್ತಿರುವ ನೌಕರರಿಗೆ ಹಲವು ತಿಂಗಳಿಂದ ವೇತನ ನೀಡಿಲ್ಲ, ಕೂಡಲೇ ಅವರಿಗೆ ಬಾಕಿ ವೇತನ ನೀಡಬೇಕು ಹಾಗೂ ಪ್ರತಿ ತಿಂಗಳು ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಮಾಡುವ ಕಾಮಿರ್ಕರಿಗೆ ಕೈಗವಸು, ಶೂ, ಮಾಸ್ಕ್ ಸೇರಿದಂತೆ ಕನಿಷ್ಠ ಸುರಕ್ಷತಾ ಸಲಕರಣೆಗಳನ್ನೊಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕನಿಷ್ಠ ವೇತನ ಜಾರಿ ಮಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲ ಸ್ವಚ್ಛವಾಹಿನಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಸಂಚಾಲಕರಾದ ಬಸವರಾಜ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.