ರಾಜ್ಯದಲ್ಲಿ ಧಾನ್ಯ ಸಂಗ್ರಹ: ಆಹಾರ ಇಲಾಖೆ ದಾಖಲೆ - Food grains procurement

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಹಳೇ ಮೈಸೂರು ಭಾಗದ ರೈತರು ಅಧಿಕವಾಗಿ ರಾಗಿ ಬೆಳೆಯುತ್ತಿದ್ದಾರೆ. ಎಂಎಸ್‌ಪಿ ಯೋಜನೆಯಡಿ ನಿಗಮವು, ರಾಜ್ಯದ ಇತರ ಜಿಲ್ಲೆಗಳಿಗಿಂತ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 1,23,250 ಮೆ.ಟನ್ ರಾಗಿ ಖರೀದಿಸಿದೆ. ಹಾಸನದಲ್ಲಿ 1,03,609, ಮೈಸೂರು -59,809, ಚಿಕ್ಕಮಗಳೂರು- 48,869, ಮಂಡ್ಯ -44,548 ಮತ್ತು ಬೆಂ.ಗ್ರಾಮಾಂತರದಲ್ಲಿ 42,806 ಮೆ.ಟನ್ ರಾಗಿ ಖರೀದಿ ಪ್ರಕ್ರಿಯೆ ನಡೆದಿದೆ.
food dept
food Grain procurement
Published on: 

ಹರೀಶ್ ಬೇಲೂರು ಬೆಂಗಳೂರು

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2025-26ರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ (Food grain procurement) ಧಾನ್ಯಗಳ ಖರೀದಿಯಲ್ಲಿ ದಾಖಲೆ ನಿರ್ಮಿಸಿದೆ.

2,46,605 ರೈತರಿಂದ 5,69,331 ಮೆಟ್ರಿಕ್ ಟನ್ ರಾಗಿ, 40,845 ರೈತರಿಂದ 2,21,750 ಮೆ.ಟನ್ ಬಿಳಿಜೋಳ ಹಾಗೂ 1,696 ರೈತರಿಂದ 5,677 ಮೆ.ಟನ್ ಭತ್ತ ಖರೀದಿಸಿದೆ. 2020-21ರಲ್ಲಿ 4.753 ಲಕ್ಷ ಮೆ.ಟನ್ ರಾಗಿ ಮತ್ತು 2024-25ರಲ್ಲಿ 1.941 ಲಕ್ಷ ಮೆ.ಟನ್ ಬಿಳಿ ಜೋಳ ಖರೀದಿಯಾಗಿತ್ತು.

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಹಳೇ ಮೈಸೂರು ಭಾಗದ ರೈತರು ಅಧಿಕವಾಗಿ ರಾಗಿ ಬೆಳೆಯುತ್ತಿದ್ದಾರೆ. ಎಂಎಸ್‌ಪಿ ಯೋಜನೆಯಡಿ ನಿಗಮವು, ರಾಜ್ಯದ ಇತರ ಜಿಲ್ಲೆಗಳಿಗಿಂತ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 1,23,250 ಮೆ.ಟನ್ ರಾಗಿ ಖರೀದಿಸಿದೆ. ಹಾಸನದಲ್ಲಿ 1,03,609, ಮೈಸೂರು -59,809, ಚಿಕ್ಕಮಗಳೂರು- 48,869, ಮಂಡ್ಯ -44,548 ಮತ್ತು ಬೆಂ.ಗ್ರಾಮಾಂತರದಲ್ಲಿ 42,806 ಮೆ.ಟನ್ ರಾಗಿ ಖರೀದಿ ಪ್ರಕ್ರಿಯೆ ನಡೆದಿದೆ.

Also Read
DRDO ರಹಸ್ಯ ಮಾಹಿತಿ ಲೀಕ್: ಹನಿಟ್ರ್ಯಾಪ್‌ ಬಲೆಗೆ ಬಿದ್ದನಾ ಮಾಜಿ ಆರ್ಮಿ ಕ್ಯಾಪ್ಟನ್? | DRDO Secret Leak
food dept

ಇನ್ನು ಬಿಳಿಜೋಳ ಖರೀದಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ 1.26 ಲಕ್ಷ ಮೆ.ಟನ್, ಬಳ್ಳಾರಿ- 75,266 ಮತ್ತು ವಿಜಯನಗರ -12,711 ಹಾಗೂ ಹಾವೇರಿಯಲ್ಲಿ 5,661 ಮೆ.ಟನ್ ಖರೀದಿ ಪ್ರಕ್ರಿಯೆಯಾಗಿದೆ. ಭತ್ತ ಖರೀದಿಯಲ್ಲಿ ಮೈಸೂರು (2,498 ಮೆ.ಟನ್) ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ (1,337 ಮೆ.ಟನ್) 2ನೇ ಸ್ಥಾನ ಮತ್ತು ಹಾವೇರಿ ( 1,115 ಮೆ.ಟನ್) 3ನೇ ಸ್ಥಾನದಲ್ಲಿದೆ.

ಖಾರೀಫ್​​​​ ಮಾರಾಟ ಋತುವಿನಲ್ಲಿ ಸಿರಿಧಾನ್ಯ, ಕಿರುಧಾನ್ಯ ಸಂಗ್ರಹಣೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಕೇಂದ್ರ ಆಹಾರ ಇಲಾಖೆ, ಕಳೆದ ತಿಂಗಳು ರಾಜ್ಯ ಆಹಾರ ಇಲಾಖೆಗೆ ಶ್ರೀ ಅನ್ನ ಸಂಗ್ರಹಣೆ ಶ್ರೇಷ್ಠತೆ ಪ್ರಶಸ್ತಿ ನೀಡಿದೆ.

79,48,674 ಕ್ವಿಂಟಾಲ್ ಸಂಗ್ರಹ

ಆಹಾರ ಧಾನ್ಯಗಳ ಖರೀದಿಗೆ ತೊಂದರೆಯಾಗದಂತೆ ಪ್ಯಾಕಿಂಗ್ ಮತ್ತು ಸಾಗಣೆಗೆ ಈವರೆಗೆ 1,58,97,348 ಗೋಣಿ ಚೀಲಗಳು ಬಳಕೆಯಾಗಿವೆ. 2026ರ ಆ.24ವರೆಗೆ ಒಟ್ಟು 79,48,674 ಕ್ವಿಂಟಾಲ್ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ. ಗೋಣಿ ಚೀಲ ಕೊರತೆಯಾಗದಂತೆ ನಿಗಮವು ಪ್ರಸ್ತುತ ಋತುವಿನಲ್ಲಿ 1.53 ಕೋಟಿ ಚೀಲಗಳನ್ನು ಈಗಾಗಲೇ ವಿವಿಧ ಜಿಲ್ಲೆಗಳಿಗೆ ಪೂರೈಸಿದೆ. ಕೇಂದ್ರ ಸರ್ಕಾರವು ಈ ಯೋಜನೆಯಡಿ ಉಚಿತವಾಗಿ ರೈತರಿಗೆ ಗೋಣಿ ಚೀಲ ನೀಡುತ್ತಿದೆ. ರಾಗಿ, ಭತ್ತ ಮತ್ತು ಜೋಳ ಮಾರಾಟ ಮಾಡುವ ರೈತರು, ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಣಿ ಚೀಲ ಅಥವಾ ಅದಕ್ಕೆ ಹಣ ಪಡೆಯಬಹುದು. ಅಧಿಕಾರಿಗಳು ನೀಡದಿದ್ದರೆ ಸಂಬಂಧಪಟ್ಟ ಮೇಧಿಕಾರಿಗಳಿಗೆ ದೂರು ನೀಡಬಹುದು.

ಎಂಎಸ್‌ಪಿ ದರ ವಿವರ

ಧಾನ್ಯ ನಿಗದಿಪಡಿಸಿದ ದರ (ಪ್ರತಿ ಕ್ವಿಂಟಾಲ್‌ಗೆ)

ರಾಗಿ 4,886

ಬಿಳಿಜೋಳ 3,699

ಭತ್ತ 2,369

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net