

ರಾಣೆಬೆನ್ನೂರ: ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವುದು ಪ್ರಮುಖವಾಗಿದೆ. ಆಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಕಡೆಗೆ ಸಾಗಬೇಕು ಎಂದು ಆರ್ಟಿಇಎಸ್ ಶಿಣ ಸಂಸ್ಥೆಯ ಅಧ್ಯ ಸುಭಾಷ ಸಾವುಕಾರ ಹೇಳಿದರು.
ನಗರದ ಆರ್ಟಿಇಎಸ್ ಪದವಿ ಕಾಲೇಜ್ನ ಆವರಣದಲ್ಲಿ ಮಂಗಳವಾರ ಪದವಿ ಪೂರ್ವ ಶಿಣ ಇಲಾಖೆ ಹಾಗೂ ಎಕ್ಸ್ಪರ್ಟ್ ವಿಜ್ಞಾನ ಪದವಿ ಪೂರ್ವ ಕಾಲೇಜ್ನ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜ್ಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಿಯ ಆಟಗಳನ್ನು ಆಡುವ ಮೂಲಕ ದೆಹಿಕ ಸಾರ್ಮಥ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾಥಿರ್ಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಮೊಬೈಲ್ ದಾಸರಾಗಿ ಕ್ರೀಡೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾಥಿರ್ ಹಂತದಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ವಿದ್ಯಾಥಿರ್ಗಳು ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಬಸವೇಶ್ವರ ಎಜುಕೇಶನ್ ಸೊಸೈಟಿಯ ಅಧ್ಯೆ ಎಸ್.ಕೆ. ಕೋಟಿ, ಎಕ್ಸ್ಪರ್ಟ್ ಕಾಲೇಜ್ನ ಕಾರ್ಯದಶಿರ್ ಡಾ. ಓ.ಎ್. ದ್ಯಾವನಗೌಡ್ರ, ಚಂದ್ರಶೇಖರ ಬಣಕಾರ, ಆರ್ಟಿಇಎಸ್ ಕಾಲೇಜ್ ಪ್ರಾಚಾರ್ಯ ಸಿ.ಎ. ಹರಿಹರ, ಭಾಸ್ಕರ ಎಚ್.ಜಿ., ಕ್ರೀಡಾ ಕಾರ್ಯದಶಿರ್ ಮೃತ್ಯುಂಜಯ ಎಲಿ ಮತ್ತಿತರರು ಉಪಸ್ಥಿತರಿದ್ದರು.