ಗೋಪಾಲಸ್ವಾಮಿ ಬೆಟ್ಟಕ್ಕೆ ನ್ಯಾಯಮೂರ್ತಿ ಭೇಟಿ

GPT CHANDRA CHUD
Published on

ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ
ತಾಲೂಕಿನ ಬಂಡೀಪುರಕ್ಕೆ ಆಗಮಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವಿ.ಚಂದ್ರಚೂಡಾ ತಮ್ಮ ಎರಡು ದಿನಗಳ ಖಾಸಗಿ ಪ್ರವಾಸ ಮುಗಿಸಿ ಶನಿವಾರ ವಾಪಸ್ಸಾದರು. ಶುಕ್ರವಾರ ಬಂಡೀಪುರಕ್ಕೆ ತಮ್ಮ ಪತ್ನಿ ಹಾಗೂ ಪುತ್ರಿಯರ ಜತೆ ಆಗಮಿಸಿದ ನ್ಯಾಯಮೂರ್ತಿಗಳು ಸರಾಯ್ ರೆಸಾರ್ಟ್‌ನಲ್ಲಿ ತಂಗಿದ್ದರು. ಸಂಜೆ ಮಧುಮಲೈ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಶನಿವಾರ ಮುಂಜಾನೆ ಸಫಾರಿಗೆ ತೆರಳಿ ಅರಣ್ಯದ ಸೌಂದರ್ಯ ಆಸ್ವಾದಿಸಿದರು. ಈ ಸಮಯದಲ್ಲಿ ದರ್ಶನ ನೀಡಿದ ಜಿಂಕೆಗಳು ಹಾಗೂ ಆನೆಗಳನ್ನು ಕಣ್ತುಂಬಿಕೊಂಡರು. ನಂತರ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ತೆರಳಿ ಗೋಪಾಲನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಪ್ರಭಾಕರನ್ , ಎಸಿಎಫ್ ಎನ್.ಪಿ.ನವೀನ್ ಕುಮಾರ್, ಆರ್‌ಎಫ್‌ಒ ಮಲ್ಲೇಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net