

ನವದೆಹಲಿ: ಕೇವಲ ಮೂರು ದಿನದಲ್ಲಿ ಉದ್ಯಮಿ ಗೌತಮ್ ಅದಾನಿ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಸುಮಾರು 66 ಸಾವಿರ ಕೋಟಿ ರೂ. ಕಳೆದುಕೊಂಡಿದ್ದಾರೆ. ಸದ್ಯ ಅವರ ಸಂಪತ್ತು 67.6 ಶತಕೋಟಿ ಡಾಲರ್ ಎಂದು ಬ್ಲೂಮ್ರ್ಬಗ್ ಬಿಲಿಯನೇರ್ ಇಂಡೆಕ್ಸ್ ಹೇಳಿದೆ. ಅದಾನಿ ಗ್ರೂಪ್ನ ಆರು ಲಿಸ್ಟೆಡ್ ಕಂಪನಿಗಳ ಷೇರು ಮೌಲ್ಯ ಗುರುವಾರ ಭಾರಿ ಕುಸಿತ ಕಂಡಿವೆ.
ಸತತ ನಾಲ್ಕನೇ ದಿನ ಈ ಕುಸಿತ ಕಂಡುಬಂದಿದೆ. ಗುರುವಾರದ ವಹಿವಾಟಿನಲ್ಲಿ ಅದಾನಿ ಎಂಟರ್ಪೆಸೆಸ್ ಷೇರು ಮೌಲ್ಯ 92.30 ರೂಪಾಯಿ ಕುಸಿದು 1,356 ರೂಪಾಯಿ, ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯ 69.70 ರೂ. ಕುಸಿದು 1,324.65 ರೂಪಾಯಿ, ಅದಾನಿ ಟ್ರಾನ್ಸ್ಮಿಷನ್ ಷೇರು ಮೌಲ್ಯ 68.70 ರೂಪಾಯಿ ಕುಸಿದು 1,305.40 ರೂಪಾಯಿ, ಅದಾನಿ ಪವರ್ ಷೇರು ಮೌಲ್ಯ 6.35 ರೂಪಾಯಿ ಕುಸಿದು 120.90 ರೂಪಾಯಿ, ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯ 59.10 ರೂ. ಕುಸಿದು 1,123.65 ಅದಾನಿ ಪೋರ್ಟ್ಸ್ ಷೇರು ಮೌಲ್ಯ 63.50 ರೂ. ಕುಸಿದು 643.20 ರೂಪಾಯಿ ಆಗಿದೆ.
ಕಾರಣವೇನು?: ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಮೂರು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖಾತೆಯನ್ನು ಸ್ತಂಭನಕ್ಕೆ ಒಳಪಡಿಸಿರುವ ಸುದ್ದಿ ಸೋಮವಾರ ಪ್ರಕಟವಾದ ಬೆನ್ನಿಗೆ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಕುಸಿಯಲಾರಂಭಿಸಿವೆ. 2016ರ ಕೇಸ್ಗೆ ಸಂಬಂಧಿಸಿ ಸೆಬಿ ನೀಡಿದ್ದ ಆದೇಶವನ್ನು ಎನ್ಎಸ್ಡಿಎಲ್ ಪಾಲಿಸಿದೆ. ಈ ಖಾತೆಗಳಿಗೂ ಅದಾನಿ ಗ್ರೂಪ್ಗೂ ಸಂಬಂಧ ಇಲ್ಲ ಎಂದು ಎನ್ಎಸ್ಡಿಎಲ್ ಸ್ಪಷ್ಟಪಡಿಸಿದೆ. ಆದಾಗ್ಯೂ, ಹೂಡಿಕೆದಾರರ ಆತಂಕಗೊಂಡು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಸೆನ್ಸೆಕ್ಸ್ 179 ಇಳಿಕೆ
ಅಮೆರಿಕದ ೆಡರಲ್ ರಿಸರ್ವ್ ನೀಡಿದ ಹೇಳಿಕೆಗೆ ಭಾರತೀಯ ಷೇರುಪೇಟೆ ಸತತ ಎರಡನೇ ದಿನವೂ ಕುಸಿತ ಅನುಭವಿಸಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ 76 ಪೈಸೆ ಮೌಲ್ಯ ಕಳೆದುಕೊಂಡು 74.08 ರೂಪಾಯಿ ಆಗಿದೆ. ಅಮೆರಿಕದ ೆಡರಲ್ ರಿಸರ್ವ್ ನಿರೀೆಗೂ ಮೊದಲೆ ಅಮೆರಿಕದ ಬೆಳವಣಿಗೆ ಮುನ್ನೋಟವನ್ನು ಈ ವರ್ಷಕ್ಕೆ ಶೇಕಡ 7 ನಿಗದಿ ಮಾಡಿದೆ. ಪ್ರತಿ ತಿಂಗಳೂ 120 ಶತಕೋಟಿ ಡಾಲರ್ ಬಾಂಡ್ ಖರೀದಿ ಯೋಜನೆಯನ್ನೂ ಹಿಂಪಡೆಯುವ ಕುರಿತ ಮಾತುಕತೆಯನ್ನು ಮುಕ್ತವಾಗಿರಿಸಿದೆ ಎಂದು ಘೋಷಿಸಿದ್ದು ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸೆನ್ಸೆಕ್ಸ್ 178.65 ಅಂಶ (0.34%), ಇಳಿದು 52,323.33 ಮತ್ತು ನಿಫ್ಟಿ 76.15 ಅಂಶ (0.48%) ಇಳಿದು 15,691.40 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ.
ಚಿನ್ನ 861 ರೂ., ಬೆಳ್ಳಿ 1,709 ರೂ. ಕುಸಿತ
ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಮಿಗೆ 861 ರೂಪಾಯಿ ಕುಸಿತ ಕಂಡು 46,863 ರೂಪಾಯಿ ಆಗಿದೆ. ಬುಧವಾರ 47,724 ರೂಪಾಯಿ ಇತ್ತು. ಬೆಳ್ಳಿಯ ಬೆಲೆ ಗುರುವಾರ ಒಂದು ಕಿಲೋಗೆ 1,709 ರೂಪಾಯಿ ಕುಸಿತ ಕಂಡು 68,798 ರೂಪಾಯಿ ಆಗಿದೆ. ಬುಧವಾರ ಇದು 70,507 ರೂಪಾಯಿ ಇತ್ತು.