ಇಂದು ರಾತ್ರಿಯಿಂದಲೇ ಸಾರಿಗೆ ಬಸ್​ ಸಂಚಾರ ಆರಂಭ

Lakshman Savadi
savadi
Published on: 

ಬೆಂಗಳೂರು: ಮೂರು ದಿನದಿಂದ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದ ಪರಿಣಾಮ ಸರ್ಕಾರಿ ಬಸ್​ಗಳ ಸಂಚಾರವಿಲ್ಲದೆ ಸಂಕಷ್ಟಕ್ಕೆ ಸಿಲುತ್ತಿದ್ದ ಪ್ರಯಾಣಿಕರೀಗ ನಿಟ್ಟುಸಿರು ಬಿಡುವಂತಾಗಿದೆ.

ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿ ಜತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಇಂದು ರಾತ್ರಿಯಿಂದಲೇ ಬಸ್ ಸಂಚಾರ ಪುನರಾರಂಭ ಆಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ.

ತಮ್ಮನ್ನೂ ಸರ್ಕಾರಿ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು ಎಂಬುದರ ಜತೆಗೆ ಹಲವು ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಪಟ್ಟುಹಿಡಿದು ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ನಡೆದ ಸಂಧಾನ ಸಭೆ ಸಫಲವಾಗಿದ್ದು, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲ್ಲ ಎಂದ ಸರ್ಕಾರ, 6ನೇ ವೇತನ ಆಯೋಗ ಜಾರಿ ಸೇರಿದಂತೆ, ಉಳಿದ ಬೇಡಿಕೆ ಈಡೇರಿಸಲು ಒಪ್ಪುವ ಮೂಲಕ ಮುಷ್ಕರಕ್ಕೆ ಇತಿಶ್ರೀ ಹಾಡಿಸಿದೆ.