ಚಾಕೊಲೇಟ್‌ ನೀಡಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಶಿಕ್ಷಕ..!

mobile using hand
Published on

ಹರಿಯಾಣ: ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿರುವ ಘಟನೆ ಹರಿಯಾಣದ ಪಂಚಕುಲದ ರಾಯ್ಪುರ್​​ರಾಣಿ ಪಟ್ಟಣದಲ್ಲಿ ಹತ್ತಿರ ನಡೆದಿದೆ.

ಆರೋಪಿಯನ್ನು ಬಂತ್​ ಸಿಂಗ್​ ಎಂದು ಗುರುತಿಸಲಾಗಿದ್ದು, ರಾಯ್ಪುರ್​​ರಾಣಿ ಪಟ್ಟಣದ ಬಳಿ ಇರುವ ಶಾಲೆಯಲ್ಲಿ ಪಂಜಾಬಿ ಭಾಷೆ ಕಲಿಸುವ ಶಿಕ್ಷಕನಾಗಿದ್ದಾನೆ. ಈತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಾಕೊಲೇಟ್‌ಗಳನ್ನು ನೀಡಿದ ನಂತರ ತನ್ನ ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಪಾಲಕರಿಗೆ ತಿಳಿದ ಕೂಡಲೇ, ಶಾಲೆಯ ಮುಂದೆ ಧರಣಿ ನಡೆಸಿದ್ದರು. ಈ ನಡುವೆ ಇದನ್ನು ಮಾತುಕತೆ ಮೂಲಕ ಬಗೆಹರಿಸಿ ಮುಚ್ಚಿ ಹಾಕಲು ಯತ್ನಿಸಲಾಗಿತ್ತು. ಕೊನೆಗೆ ಆರೋಪಿಯ ವಿರುದ್ಧ ಪಾಲಕರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಈ ವಿಷಯ ತಿಳಿದ ಕೂಡಲೇ ಆರೋಪಿ ಪರಾರಿಯಾಗಿದ್ದಾನೆ.

ಪೋಕ್ಸೊ ಕಾಯ್ದೆಯಡಿ ಶಾಲೆಯ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಿಲ್ಲಾ ಶಿಕ್ಷಣ ಕಚೇರಿಯೂ ಘಟನೆಯ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net