ಮೂಲಭೂತವಾದಿಗಳಿಗೆ ಸರ್ಕಾರ ಶರಣು: ಕಾರಂತ್ ಆಕ್ರೋಶ

jagadeesh karant
ಜಗದೀಶ ಕಾರಂತ್ , ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ .
Published on

ಶಿವಮೊಗ್ಗ: ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದ ಬಗ್ಗೆ ಒಂದು ಖಡಕ್ ಹೇಳಿಕೆ ನೀಡಲಿಕ್ಕೂ ಸಿಎಂ ಹಾಗೂ ಗೃಹ ಸಚಿವರಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಶರಣಾಗಿದೆ ಎಂದು ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ ಜಗದೀಶ ಕಾರಂತ್ ಗಂಭೀರವಾಗಿ ಆರೋಪಿಸಿದರು.

ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತಕ್ಕಾಗಿ ಏನು ಬೇಕಾದರೂ ಮಾಡಲಿ. ಆದರೆ ಸಮಾಜ ಒಡೆಯುವ ಕೃತ್ಯ ಬೆಂಬಲಿಸಿದರೆ, ಇಂತಹ ಘಟನೆಗಳಲ್ಲೂ ಪಕ್ಷಪಾತ ನಿಲುವು ಅನುಸರಿಸಿದರೆ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಳೆದ 10 ವರ್ಷಗಳಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಬಿಡಿಬಿಡಿಯಾಗಿ ನೋಡದೆ ಎಲ್ಲವನ್ನೂ ಸಮೀಕರಿಸಿ ನೋಡಬೇಕು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಇದರ ಪರಿಣಾಮವನ್ನು ನಮ್ಮ ಮಕ್ಕಳು, ಮೊಮ್ಮಕ್ಕಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ವರ್ಷ ಶಿವಮೊಗ್ಗದಲ್ಲಿ ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಯಿತು. ಆಗಲೂ ಸಮಾಜ ಅದನ್ನು ಖಂಡಿಸಲಿಲ್ಲ. ಈಗ ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣವನ್ನೂ ಸರ್ಕಾರ ಖಂಡಿಸುತ್ತಿಲ್ಲ. ಇದು ನಿಜಕ್ಕೂ ದುರದೃಷ್ಟಕರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net