ಕೇಮ್ ಚೋ ಬದಲು ನಮಸ್ತೆ!

Trump
Published on

ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್​ನಲ್ಲಿ ಭಾಗವಹಿಸಲಿರುವ ಸಾರ್ವಜನಿಕ ಕಾರ್ಯಕ್ರಮದ ಘೋಷವಾಕ್ಯವನ್ನು ಗುಜರಾತ್ ಸರ್ಕಾರ ಬದಲಿಸಿದೆ. ‘ಕೇಮ್ ಚೋ ಟ್ರಂಪ್’ ಬದಲು ‘ನಮಸ್ತೆ ಅಧ್ಯಕ್ಷ ಟ್ರಂಪ್’ ಎಂದು ಮಾರ್ಪಾಡಿಸಿದೆ.

‘ಕೇಮ್ ಚೋ ಟ್ರಂಪ್’ (ಹೇಗಿದ್ದೀರಿ ಟ್ರಂಪ್) ಎಂಬುದು ಗುಜರಾತಿ ಭಾಷೆಯದ್ದು. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗುತ್ತದೆ. ‘ನಮಸ್ತೆ ಅಧ್ಯಕ್ಷ ಟ್ರಂಪ್’ ಎಂಬುದು ಇಡಿ ಭಾರತವನ್ನು ಒಳಗೊಳ್ಳುತ್ತದೆ ಮತ್ತು ಭಾರತದ ಸಾಂಪ್ರಾದಾಯಿಕ ಸ್ವಾಗತವೂ ಆಗಿದೆ ಎಂದು ಕೇಂದ್ರ ಸರ್ಕಾರ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಟ್ರಂಪ್ ಸ್ವಾಗತ ಸಾಮಗ್ರಿಗಳನ್ನೂ ಹೊಸ ಘೋಷವಾಕ್ಯದಂತೆ ಬದಲಾಯಿಸಲಾಗುತ್ತದೆ ಎಂದು ಗುಜರಾತ್​ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿಲ್ ಮುಕಿಮ್ ತಿಳಿಸಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನದ ಖ್ಯಾತಿಯ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net