ಸಾರಿಗೆ ಸಂಸ್ಥೆಗಳಲ್ಲಿ 6800 ಸಿಬ್ಬಂದಿ ನೇಮಕಕ್ಕೆ ಗ್ರೀನ್ ಸಿಗ್ನಲ್

ksrtc
Published on

ಬೆಂಗಳೂರು:ಸಾರಿಗೆ ಸಂಸ್ಥೆಗಳಲ್ಲಿ ಮೊದಲ ಹಂತದಲ್ಲಿ 6,500 ಚಾಲನಾ ಸಿಬ್ಬಂದಿ ಹಾಗೂ 300 ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ.

ಸಾರಿಗೆ ಸಂಸ್ಥೆಗಳಲ್ಲಿ 8 ವರ್ಷಗಳಿಂದ ಅಂದರೆ 2016ರಲ್ಲಿ ನಡೆದ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಈವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13,669 ಖಾಲಿ ಹುದ್ದೆಗಳಿದ್ದವು. ಈ ಬಗ್ಗೆ 13,000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಸರ್ಕಾ ರ ಮೊದಲ ಹಂತವಾಗಿ 6,800 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ ನೀಡಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದೆ. ಜನವರಿ 2024ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆಗೊಳ್ಳಲಿದೆ. ಕೆಕೆಆರ್‌ಟಿಸಿಯಲ್ಲಿ 300 ಕಂಡಕ್ಟರ್‌ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಒಟ್ಟು 8,719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸ್ಥೆವಾರು ನೇಮಕ ವಿವರ

ಕೆಎಸ್‌ಆರ್‌ಟಿಸಿ: ಡ್ರೈವರ್ ಕಮ್ ಕಂಡಕ್ಟರ್-2000

ತಾಂತ್ರಿಕ ಸಿಬ್ಬಂದಿ : 300

ಎನ್‌ಡಬ್ಲ್ಯೂಕೆಆರ್‌ಟಿಸಿ: ಡ್ರೈವರ್ ಕಮ್ ಕಂಡಕ್ಟರ್-2000

ಬಿಎಂಟಿಸಿ: ಕಂಡಕ್ಟರ್-2500

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net