ಸಂಘಟಿತರಾದಲ್ಲಿ ಸರ್ಕಾರದ ಸೌಲಭ್ಯ

vishwakarma jayanthi (
ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದಲ್ಲಿ ವಿಶ್ವಕರ್ಮ ಸಮಾಜದಿಂದ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು. ಕಲ್ಲೇಶ್‌ಚಾರ್, ಮಲ್ಲಿಕಾರ್ಜುನ್, ಮಹೇಂದ್ರಚಾರ್, ಚೇತನ್‌ಕುಮಾರ್ ಮತ್ತಿತರಿದ್ದರು.
Published on

ಕಡೂರು: ಸಂಘಟನೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪುರಸಭಾ ಮಾಜಿ ನಾಮಿನಿ ಸದಸ್ಯ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಹಿರೇನಲ್ಲೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಪೂಜಾಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಹೋಬಳಿ ಮಟ್ಟದ ಸಂಘಗಳು ಹೆಚ್ಚು ಸಂಘಟಿತರಾಗಬೇಕಿದೆ ಎಂದರು.
ಹೋಬಳಿ ಘಟಕದ ಅಧ್ಯಕ್ಷ ಎಸ್.ಎಂ.ಕಲ್ಲೇಶಚಾರ್, ವಡ್ನಾಳ್ ಮಠದ ಅಧ್ಯಕ್ಷ ಮಹೇಂದ್ರಚಾರ್, ಜಿಲ್ಲಾ ವಿಶ್ವಕರ್ಮ ಸಮಿತಿಯ ಅಧ್ಯಕ್ಷ ಬಿ.ಜೆ.ಚೇತನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರತೀಶ್, ಉಮಾಶಂಕರ್, ರವಿಕುಮಾರ್, ಪ್ರಕಾಶ್‌ಚಾರ್, ಚಂದ್ರಶೇಖರ್, ಎಚ್.ಎ.ರವಿಕುಮಾರ್, ಡಿ.ಪಿ.ಲೋಕೇಶ್‌ಚಾರ್, ಎಚ್.ಬಿ.ಕೃಷ್ಣಚಾರ್, ವಿನೋದಚಾರ್, ಬಿ.ಪಿ.ವಿಶ್ವನಾಥ್‌ಚಾರ್, ವಿನಯ್‌ಕುಮಾರ್, ಪ್ರತೀಕ್, ಐಶ್ವರ್ಯ, ಮಲ್ಲಿಕಾರ್ಜುನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net