ಮಿಲಿಟರಿ ಅಫೇರ್ಸ್​ ಇಲಾಖೆ ಸೃಷ್ಟಿಸಿದ ಕೇಂದ್ರ ಸರ್ಕಾರ: ಹೊಸ ಇಲಾಖೆಗೆ ಸಿಡಿಎಸ್​ ನೇತೃತ್ವ

bipin rawath567
Published on

ನವದೆಹಲಿ: ಹೊಸದಾಗಿ ಚೀಫ್ ಆಫ್​ ಡಿಫೆನ್ಸ್ ಸ್ಟಾಫ್​ (ಸಿಡಿಎಸ್​) ಹುದ್ದೆ ಸೃಷ್ಟಿಸಿ ಜನರಲ್ ಬಿಪಿನ್ ರಾವತ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ ಸರ್ಕಾರ, ಇದೀಗ ಮಿಲಿಟರಿ ಅಫೇರ್ಸ್ ಡಿಪಾರ್ಟ್​ಮೆಂಟ್ ಎಂಬ ಹೊಸ ಇಲಾಖೆಯನ್ನು ಸೃಷ್ಟಿಸಿದೆ.

ಈ ಇಲಾಖೆಯ ಮುಖ್ಯಸ್ಥರಾಗಿ ಸಿಡಿಎಸ್ ಇರುತ್ತಾರೆ. ಹೊಸ ಇಲಾಖೆಯ ಕಾರ್ಯಚೌಕಟ್ಟಿನ ಪ್ರಕಾರ, ಇದು ಭೂಸೇನೆ, ನೌಕಾಪಡೆ, ವಾಯುಪಡೆಗಳ ಸಮನ್ವಯದ ಕಾರ್ಯ ಮತ್ತು ಕ್ಯಾಪಿಟಲ್ ಅಕ್ವಿಸಿಷನ್​ ಹೊರತುಪಡಿಸಿದ ಸೇವೆಗೆ ಸಂಬಂಧಿತ ಪ್ರೊಕ್ಯೂರ್​ಮೆಂಟ್​ ಕಡೆಗೆ ಗಮನಹರಿಸಲಿದೆ.

ಕೇಂದ್ರ ಸರ್ಕಾರ ಸೇನೆಯ ಸುಧಾರಣಾ ಕ್ರಮಕ್ಕೆ ಮುನ್ನುಡಿ ಬರೆದಿದ್ದು, ಈ ಹೊಸ ಇಲಾಖೆ ಈ ದಿಶೆಯಲ್ಲಿ ಹೊಸ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net