

Govinda: 90ರ ದಶಕದ ಸೂಪರ್‌ಸ್ಟಾರ್ ಗೋವಿಂದ ಪತ್ನಿ ಸುನೀತಾ ಅಹುಜಾ 38 ವರ್ಷದ ದಾಂಪತ್ಯದ ನಂತರ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಇದೆ. ಗೋವಿಂದ ಅವರ ವಕೀಲ ಲಲಿತ್ ಬಿಂದ್ರಾ ಪ್ರತಿಕ್ರಿಯಿಸಿ ಈ ವಂದತಿಯನ್ನು ತಳ್ಳಿ ಹಾಕಿದ್ದಾರೆ.
ಸುನೀತಾ ಮತ್ತು ಗೋವಿಂದ ಮಾರ್ಚ್ 11, 1987 ರಂದು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 38 ವರ್ಷಗಳ ದಾಂಪತ್ಯದ ನಂತರ ಈ ಜೋಡಿ ಸುನೀತಾ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ನಟ ಇತರ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾರೆ, ಮೋಸ ಮಾಡಿದ್ದಾರೆ ಮತ್ತು ಅವರಿಗೆ ನೋವುಂಟು ಮಾಡಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ. ‘ಪ್ರೀತಿ ಮತ್ತು ಮದುವೆಯಲ್ಲಿ ಮೋಸ, ನೋವು ಮತ್ತು ಬೇರ್ಪಡುವಿಕೆ’ ಆಧಾರದ ಮೇಲೆ ಅವರು ಗೋವಿಂದ ವಿಚ್ಛೇದನವನ್ನು ಕೋರಿದ್ದಾರೆ. ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ, 195 ರ ಸೆಕ್ಷನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಮೇ 25ರಂದು ಗೋವಿಂದ ಅವರಿಗೆ ಸಮನ್ಸ್ ಕಳುಹಿಸಿತ್ತು. ವಿಚಾರಣೆಯ ಸಮಯದಲ್ಲಿ ಸುನೀತಾ ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಗೋವಿಂದ ಗೈರುಹಾಜರಾಗಿದ್ದರು. ಹೀಗಾಗಿ, ವಿಚಾರಣೆ ಮುಂದಕ್ಕೆ ಹೋಗುತ್ತಲೇ ಇದೆ.ಇತ್ತೀಚಿನ ವ್ಲಾಗ್‌ನಲ್ಲಿ, ಸುನೀತಾ ಅಹುಜಾ ತಮ್ಮ ವಿವಾಹದ ಸುತ್ತಲಿನ ವಿಚ್ಛೇದನ ವದಂತಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬಂದಿದೆ.
ದಂಪತಿ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಈಗ ಅವರು ಮತ್ತೆ ಒಟ್ಟಿಗೆ ಸೇರಲು ಯೋಜಿಸುತ್ತಿದ್ದಾರೆ ಎಂದು ಅವರ ವಕೀಲರು ಹೇಳಿದ್ದರು. ಅಲ್ಲದೆ, ನನ್ನನ್ನು ಪತಿಯಿಂದ ದೂರ ಮಾಡಲು ಯಾರೂ ಸಾಧ್ಯವಿಲ್ಲ ಎಂದು ಸುನೀತಾ ಅವರು ನಿರಂತರವಾಗಿ ಹೇಳುತ್ತಲೇ ಬರುತ್ತಿದ್ದಾರೆ.
ಗೋವಿಂದ ಅವರ ವಕೀಲ ಲಲಿತ್ ಬಿಂದ್ರಾ ಪ್ರತಿಕ್ರಿಯಿಸಿದರು, " ಸುನೀತಾ ಮತ್ತು ಗೋವಿಂದ ನಡುವೆ ಅಂತಹ ಯಾವುದೇ ಬಿರುಕು ಇದ್ದರೆ, ಇಬ್ಬರೂ ಮಾಧ್ಯಮಗಳಿಗೆ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ಯಾವುದೇ ಕೇಸ್ ಇಲ್ಲ, ಎಲ್ಲವನ್ನೂ ಇತ್ಯರ್ಥಗೊಳಿಸಲಾಗುತ್ತಿದೆ, ಜನರು ಹಳೆಯ ವಿಷಯಗಳನ್ನು ಮತ್ತೆ ತರುತ್ತಿದ್ದಾರೆ. ಈ ಗಣೇಶ ಚತುರ್ಥಿಯಲ್ಲಿ ನೀವು ಎಲ್ಲರನ್ನು ಒಟ್ಟಿಗೆ ನೋಡುತ್ತೀರಿ ಎಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗೋವಿಂದ ಅವರು ಆಸ್ತಿ
ಗೋವಿಂದ ಅವರು ಆಸ್ತಿ 150-170 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜುಹುವಿನಲ್ಲಿರುವ ‘ಜಲ್ ದರ್ಶನ್’ ಬಂಗಲೆ ಇದು 16 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ್ದಾಗಿದೆ. ಕೋಲ್ಕತ್ತಾ, ರಾಯಗಢ ಮತ್ತು ಲಕ್ನೋದಲ್ಲಿ ತೋಟದ ಮನೆಗಳು/ಫ್ಲಾಟ್‌ಗಳಿವೆ. ವಿಚ್ಛೇದನದ ಸಮಯದಲ್ಲಿ, ಗಂಡನು ತನ್ನ ಹೆಂಡತಿಯ ಖರ್ಚಿಗಾಗಿ ಒಂದು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ನ್ಯಾಯಾಲಯ ಅಥವಾ ಕಾನೂನಿನಿಂದ ನಿಗದಿಪಡಿಸಲಾಗಿಲ್ಲ.