ಗೋಂದಳಿ ಸಮಾಜಕ್ಕೆ ಸರ್ಕಾರ ರ್ನಿಲಕ್ಷ್ಯ

New Project
Published on

ತಾಳಿಕೋಟೆ: ಸರ್ಕಾರದ ರ್ನಿಲಕ್ಷ$್ಯದಿಂದಾಗಿ ಗೋಂದಳಿ ಸಮಾಜ ಹಿಂದುಳಿಯಲು ಕಾರಣವಾಗಿದೆ ಎಂದು ವಡವಡಗಿ ನಂದಿಮಠದ ಶ್ರೀ ವೀರಸಿದ್ಧ ಸ್ವಾಮೀಜಿ ಹೇಳಿದರು.

ಗೋಂದಳಿ ಸಮಾಜದಿಂದ ನಿರ್ಮಿಸಿರುವ ಅಂಬಾಭವಾನಿ ನೂತನ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನಿಡಿದ ಶ್ರೀಗಳು, ಚುನಾವಣೆ ಬಂದಾಗ ಮಾತ್ರ ಸರ್ಕಾರಕ್ಕೆ ಹಿಂದುಳಿದ ಸಮಾಜಗಳ ನೆನಪು ಬರುತ್ತದೆ. ಚುನಾವಣೆ ನಂತರ ಸಮಾಜದ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಸರ್ಕಾರದ ನಡವಳಿಕೆ ವಿರುದ್ಧ ಕಿಡಿ ಕಾರಿದರು.

ಸಮಾಜದವರು ಸಂಟಿತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಏಳಿಗೆಗೆ ಪಾಲಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗುಂಡಕನಾಳ ಬೃಹನ್ಮಠ ಶ್ರೀಗುರುಲಿಂಗ ಶಿವಾಚಾರ್ಯರು ಮಾತನಾಡಿ, ಎಲೆ ಮರೆಕಾಯಿಯಂತೆ ಗೋಂದಳಿ ಸಮಾಜ ತನ್ನ ಕಾಯಕ ಮಾಡುತ್ತ ಬರುತ್ತಿದೆ ಎಂದರು.

ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಶ ವಿರಕ್ತಮಠ, ಹಿರೂರ ಅನ್ನದಾನೇಶ್ವರ ಮಠದ ಶ್ರೀ ಜಯಸಿದ್ಧೇಶ್ವರ ಸ್ವಾಮೀಜಿ, ಸದಾನಂದ ಬ್ಯಾಂಕ್​ ವ್ಯವಸ್ಥಾಪಕ ನಾರಾಯಣ ಸುತೇಕಾರ, ಗೋಂದಳಿ ಸಮಾಜದ ಅಧ್ಯ ವಿಠ್ಠಲ ಸೂರ್ಯವಂಶಿ, ಸಮಾಜದ ಅಧ್ಯಕ್ಷ ಕೆ.ಜಯರಾಮಯ್ಯ, ಧಾರ್ಮಿಕ ಮುಖಂಡ ಸೈಯ್ಯದ್​ ಶಕೀಲ ಅಹ್ಮದ ಖಾಜಿ, ಸುರೇಶ ಬಿಸೆ, ಪ್ರದಿಪ ಬಿಸೆ ಇತರರಿದ್ದರು.

ಭವಾನಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೋಮ ಹವನ ಪೂಜೆಯನ್ನು ಮಂದಿರದ ಅರ್ಚಕ ಸಂತೋಷ ಭಟ್ಟ ಜೋಶಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net