

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಸಂಬಂಧ ಸರ್ಕಾರ ಮತ್ತೆ ಗೊಂದಲ ಸೃಷ್ಟಿಸಿದೆ. ವರ್ಗಾವಣೆ ಆಗಿದ್ದ ಇನ್‌ಸ್ಪೆಕ್ಟರ್‌ಗಳ ಆದೇಶವನ್ನು ರದ್ದುಪಡಿಸಿ ಅದೇ ಜಾಗಕ್ಕೆ ಬೇರೆಯವರನ್ನು ವರ್ಗಾವಣೆ ಮಾಡಲಾಗಿದೆ.
ಜಿ.ಎನ್. ನಾಗೇಶ್-ಕಾಮಾಕ್ಷಿಪಾಳ್ಯ, ಅಜಯ್ ಸಾರಥಿ-ಯಶವಂತಪುರ, ಮನೋಜ್ ಕುಮಾರ್- ಬನ್ನೂರು(ಮೈಸೂರು ಜಿಲ್ಲೆ) ವರ್ಗಾವಣೆ ಮಾಡಲಾಗಿದೆ. ಈ ಮೊದಲು ಕಾಮಾಕ್ಷಿಪಾಳ್ಯ ಠಾಣೆಗೆ ಬಿ.ಎನ್.ಪುನೀತ್ ಹಾಗೂ ಯಶವಂತಪುರ ಠಾಣೆಗೆ ಧನಂಜಯ್ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಆಗಸ್ಟ್ ಮೊದಲ ವಾರದಲ್ಲಿ 211 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕಾಂಗ್ರೆಸ್ ಸಚಿವ, ಶಾಸಕ ಮತ್ತು ಮುಖಂಡರ ನಡುವೆ ಅಸಮಧಾನ ವ್ಯಕ್ತವಾಗಿತ್ತು. ದಿಢೀರ್ ಬೆಂಗಳೂರು ನಗರದ 69 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಹೊಸ ಆದೇಶ ಹೊರಡಿಸಿದರೂ ಮತ್ತೆ 12 ಠಾಣಾಧಿಕಾರಿಗಳಿಗೆ ವಾಪಸ್ ಕಳುಹಿಸಿದ್ದರು. ಇದೀಗ ಮತ್ತೆ ಇಬ್ಬರು ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ರದ್ದುಪಡಿಸಿದೆ.