ಯುವಕರ ಅಭ್ಯುದಯಕ್ಕೆ ಸರ್ಕಾರ ದಿಟ್ಟ ಹೆಜ್ಜೆ; ಗ್ರಾಮೀಣ ಮಟ್ಟದಲ್ಲೇ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ನಿರ್ಧಾರ

Vidhana Soudha vvani
Published on

ಬೆಂಗಳೂರು: ಯುವ ಸಮುದಾಯದ ಅಭ್ಯುದಯಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದಲೇ ಯಶಸ್ವಿಗೊಳಿಸಲು ಸರ್ಕಾರ ಮುಂದಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಯರ್åಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಮೂಲಕ ಅನುಷ್ಠಾನ ಮಾಡಲು ಯೋಜನೆ ರೂಪಿಸಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ, ಗ್ರಾಪಂ ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಯುವ ಸಬಲೀಕರಣ ಇಲಾಖೆ ಮೂಲಕ ಸ್ಥಳೀಯ ಯುವಕ, ಯುವತಿ, ಸಂಘ, ಸಂಸ್ಥೆಗಳ, ಅಧ್ಯಕ್ಷರು, ಕಾರ್ಯದರ್ಶಿಗಳನ್ನ ಆಹ್ವಾನಿತ ಸದಸ್ಯರನ್ನಾಗಿ ನಿಯೋಜಿಸಲು ಆದೇಶ ಹೊರಡಿಸಲಾಗಿದೆ. ಎಲ್ಲ ಹಳ್ಳಿಗಳಲ್ಲಿ, ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ’ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮವನ್ನು ಶಾಲೆಗಾಗಿ ಕೊಡುಗೆ ನೀಡುವ ಯುವಸಂಘಗಳನ್ನು ತಾಲೂಕಿಗೆ ಒಂದರಂತೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಯನ್ನು ಎನ್​ಎಸ್​ಎಸ್ ಸ್ವಯಂ ಸೇವಕರ ಮೂಲಕ ಗ್ರಾಮೀಣಾ ಭಿವೃದ್ಧಿ ಯೋಜನೆಗಳಿಗೆ ಸಹಾಯ ನೀಡಲಾಗುತ್ತದೆ.

ಸಿಬ್ಬಂದಿ ಕೊರತೆಯಿಂದ ಪಂಚಾಯತಿಗಳ ಮಟ್ಟದಲ್ಲಿ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಗುತ್ತಿದ್ದ ತೊಂದರೆ ತಪ್ಪಿಸಲು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಪಂಚಾಯಿತಿಗಳಿಗೆ ಆಹ್ವಾನಿತರಾಗಿ ಕಳುಹಿಸಲು ನಿರ್ಧರಿಸಲಾಗಿದೆ. | ಡಾ. ಕೆ.ಸಿ. ನಾರಾಯಣಗೌಡ ಯುವ ಸಬಲೀಕರಣ ಸಚಿವ

ಪ್ರಮುಖ ಅಂಶಗಳು

  • ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಮೂಲಕ 1-5 ಎಕರೆಯಲ್ಲಿ ಆಟದ ಮೈದಾನ ನಿರ್ವಣ, ದೈಹಿಕ ಶಿಕ್ಷಕರ ಮೂಲಕ ನಿರ್ವಹಣೆ.
  • ಜಿ.ಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ, ಕ್ರೀಡಾ ಗಂಟು ಖರೀದಿಗೆ ಶೇ.2 ಅನುದಾನ
  • ಗ್ರಾಮೀಣ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಗೆ ಉತ್ತೇಜನ.
  • ಕರಕುಶಲ ಕಲೆ ಉತ್ಪನ್ನಗಳ ಯುಎನ್​ಡಿಪಿ ಪೋರ್ಟಲ್​ನ ಡಿಡಿಡಿ.ಓಚ್ಠಠಜಚ್ಝkಚ್ಟ.ಟಞನಲ್ಲಿ ದಾಖಲಿಸುವುದು.
  • ಉತ್ತಮ ಸಾಧಕರುಗಳಿಗೆ ಕ್ರೀಡಾ ಹಾಗೂ ಯುವ ಪ್ರಶಸ್ತಿ ಬಹುಮಾನ ವಿತರಣೆ.
  • ಪ್ರತಿಭಾನ್ವಿತ ಎಸ್ಸಿ,ಎಸ್ಟಿ ಕ್ರೀಡಾಪಟು ಗಳಿಗೆ ವಿಶೇಷ ಕ್ರೀಡಾನ್ವೇಷಣೆ ಮತ್ತು ತರಬೇತಿ ನೀಡುವುದು.
  • ಯುವಜನರಿಗೆ ಸಾಹಸ ಕ್ರೀಡೆಗಳ ಅಡಿಯಲ್ಲಿ ಜಲಸಾಹಸ, ವಾಯು ಸಾಹಸ ಮತ್ತು ಭೂಸಾಹಸ ಕ್ರೀಡೆಗಳ ತರಬೇತಿ ನೀಡುವುದು.
  • ಗ್ರಾಮೀಣ ಕ್ರೀಡಾಪಟುಗಳಿಗೆ ಪೌಷ್ಟಿಕಾಹಾರ ನೀಡುವುದು, ಕ್ರೀಡಾ ವಿಜ್ಞಾನದ ಮೂಲಕ ವೈಜ್ಞಾನಿಕ ತರಬೇತಿ ನೀಡುವುದು.
  • ಯುವ ಜನರ ಮಾನಸಿಕ ಆರೋಗ್ಯ ಸದೃಢಗೊಳಿಸಲು, ಗ್ರಾಮ ಮಟ್ಟದಿಂದಲೇ ಆಪ್ತ ಸಮಾಲೋಚನೆ ಆಯೋಜಿಸುವುದು.
  • ಎನ್​ಎಸ್​ಎಸ್ ಮೂಲಕ ಗ್ರಾಮ ಮಟ್ಟದಲ್ಲಿ, ಯುವ ಗ್ರಾಮ ಸಭೆ, ವಿಶೇಷ ವೈದ್ಯಕೀಯ ಶಿಬಿರಗಳು, ಶ್ರಮದಾನ ಶಿಬಿರ ಆಯೋಜನೆ
  • ಪರಿಸರ ಮತ್ತು ಸಂರಕ್ಷಣೆ ಕಾರ್ಯಕ್ರಮಗಳ ಬಗ್ಗೆ ತೊಡಗಿಸಿಕೊಳ್ಳುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net