More

    ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ; ಟೋಯಿಂಗ್​ಗೆ ಸದ್ಯದಲ್ಲೇ​ ಹೊಸ ನಿಯಮ: ಏನೇನಿರುತ್ತೆ ಷರತ್ತು?

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿರುವ ಟೋಯಿಂಗ್ ವಿಚಾರ ಸಂಚಾರ ಪೊಲೀಸ್​ ವಿಭಾಗವನ್ನಷ್ಟೇ ಅಲ್ಲದೆ ಸರ್ಕಾರವನ್ನೂ ಮುಜುಗರಕ್ಕೆ ಈಡುಮಾಡಿದೆ. ಪರಿಣಾಮವಾಗಿ ಹಿರಿಯ ಪೊಲೀಸ್​ ಅಧಿಕಾರಿಗಳು ಮಾತ್ರವಲ್ಲದೆ ಸಿಎಂ-ಗೃಹಸಚಿವರು ಕೂಡ ತಲೆಕೆಡಿಸಿಕೊಂಡಿದ್ದು, ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನ ಸೃಷ್ಟಿಯಾಗಿದೆ.

    ಈ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆ ವಿಕಾಸಸೌಧದಲ್ಲಿ ನಡೆದಿದ್ದು, ಒಂದಷ್ಟು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ಪ್ರಮುಖವಾಗಿ ಇನ್ನು 15 ದಿನಗಳ ಕಾಲ ಟೋಯಿಂಗ್ ಸ್ಥಗಿತಗೊಳಿಸುವುದು ಎಂದು ನಿರ್ಧರಿಸಲಾಗಿದೆ.

    ಅಷ್ಟೇ ಅಲ್ಲದೆ ಟೋಯಿಂಗ್​ ಗುತ್ತಿಗೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಸಂಬಂಧಿಕರಿಗೆ ಟೆಂಡರ್​ ಕೊಟ್ಟಿರುವ ವಿಚಾರ ಕೂಡ ಪರಿಶೀಲನೆಗೊಳ್ಳಲಿದೆ. ಆ ರೀತಿ ಆಗದಂತೆ ಟೋಯಿಂಗ್​ ಗುತ್ತಿಗೆ ನೀಡುವಂತೆ ಕ್ರಮಕೈಗೊಳ್ಳಲಾಗುತ್ತದೆ. ದಂಡದ ವಿಚಾರದಲ್ಲೂ ಮರು ಪರಿಶೀಲನೆ ನಡೆಯಲಿದ್ದು, ಕೆಲವೊಂದು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಸರ್ಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನು ಕೂಡ ಪರಿಶೀಲನೆ ಮಾಡಲಿದ್ದು, ಅಂಥ ಪ್ರದೇಶದಲ್ಲಿ ಎಲ್ಲಿ ಪಾರ್ಕಿಂಗ್​ಗೆ ಜಾಗ ಇದೆ ಎಂಬುದನ್ನು ಪೊಲೀಸರು ಗುರುತಿಸಲಿದ್ದಾರೆ ಎಂದು ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹಸಚಿವರು ತಿಳಿಸಿದ್ದಾರೆ.

    ಸಂಚಾರ ಪೊಲೀಸರು ಸಾರ್ವಜನಿಕರ ಜತೆ ಸಭ್ಯವಾಗಿ ವರ್ತಿಸಬೇಕು ಎಂದು ಪೊಲೀಸರಿಗೆ ತಿಳಿ ಹೇಳುತ್ತೇವೆ. ಇನ್ನು ಮುಂದೆ ಪೊಲೀಸರ ಬಳಿ ಬಾಡಿ ವೋರ್ನ್​ ಕ್ಯಾಮರಾ ಇರುತ್ತದೆ. ಎಲ್ಲವೂ ರೆಕಾರ್ಡ್​ ಆಗಲಿದೆ. ಒಟ್ಟಾರೆಯಾಗಿ ಟೋಯಿಂಗ್ ಸಂಬಂಧ ಇನ್ನು 15 ದಿನಗಳಲ್ಲಿ ಹೊಸ ನಿಯಮ ರೂಪಿಸಲಾಗುವುದು ಎಂದು ಗೃಹಸಚಿವರು ತಿಳಿಸಿದ್ದಾರೆ.

    ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts