ಹೊಸ ಕ್ರಮಕ್ಕೆ ಮುಂದಾದ ಸರ್ಕಾರ; ಜನವರಿ 1ರಿಂದ ಭಿಕ್ಷುಕರಿಗೆ ಭಿಕ್ಷೆ ಹಾಕಿದರೆ FIR!

by (30)
Published on

ಇಂದೋರ್​: ಇಂದೋರ್ ನಗರವನ್ನು ಬಿಕ್ಷಟನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ  2025ರ ಜ.1ರಿಂದ ಯಾರಿಗಾದರೂ ಭಿಕ್ಷೆ ಹಾಕುವುದು ಕಂಡು ಬಂದರೆ ಅವರ(ಭಿಕ್ಷೆ ನೀಡುವವರ) ವಿರುದ್ಧ ಎಫ್​ಐಆರ್(FIR) ದಾಖಲಿಸಲಾಗುವುದು ಎಂದು ಸೋಮವಾರ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇಂದೋರ್​ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ, ಭಿಕ್ಷಾಟನೆಯ ವಿರುದ್ಧ ನಮ್ಮ ಜಾಗೃತಿ  ಅಭಿಯಾನ ಇದೇ ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ. ಜ.1ರಿಂದ ಯಾವುದಾದರೂ ವ್ಯಕ್ತಿಗೆ ಬಿಕ್ಷೆ ನೀಡಿವುದು ಕಂಡುಬಂದರೆ ಅವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆಶಿಶ್​ ಸಿಂಗ್​ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಕ್ಷಟನೆ ಬೇಡುವಂತೆ ಮಾಡುವ ವಿವಿಧ ಗ್ಯಾಂಗ್​ಗಳಿವೆ ಎಂದು ವರದಿಯಾಗಿದ್ದು, ಕೆಲವರು ಈ ಕುರಿತು ದೂರು ಕೂಡ ಸಲ್ಲಿಸಿದ್ದಾರೆ. ಇಲ್ಲಿನ ಬಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲದೆ, ಅಂತವರು ಕಂಡುಬಂದರೆ ನಮಗೆ ಕಂಪ್ಲೇಂಟ್​ ಮಾಡಿ. ಬಿಕ್ಷೆ ನೀಡುವ ಮೂಲಕ ಪಾಪದ ಕಾರ್ಯದಲ್ಲಿ ಪಾಲುದಾರರಾಗದಂತೆ ನಾನು ಇಂದೋರ್​ನ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಇಂದೋರ್ ಸೇರಿದಂತೆ ದೇಶದ 10 ನಗರಗಳನ್ನು ಭಿಕ್ಷುಕರ ಮುಕ್ತಗೊಳಿಸಲು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಆಶಿಶ್​ ಸಿಂಗ್​ ವಿವರಿಸಿದರು,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net