ನಾಳೆ ಕೆಲವೆಡೆ ಸರ್ಕಾರಿ ರಜೆ, ಗಣೇಶ ವಿಸರ್ಜನೆಗೆಂದೇ ಘೋಷಣೆ: ಎಲ್ಲೆಲ್ಲಿ? ಇಲ್ಲಿದೆ ವಿವರ..

Ganesha Chaturthi
Published on

ಹೈದರಾಬಾದ್​: ಗಣೇಶ ಹಬ್ಬಕ್ಕೆ ಸರ್ಕಾರಿ ರಜೆ ಘೋಷಣೆ ಇರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಗಣೇಶ ವಿಸರ್ಜನೆಗೂ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ನಾಳೆ ಕೆಲವೆಡೆ ಸರ್ಕಾರಿ ಕಚೇರಿ, ಸಂಸ್ಥೆಗಳು ಮುಚ್ಚಿರಲಿವೆ.

ಹಾಗಂತ ಕರ್ನಾಟಕದವರು ಖುಷಿ ಪಡುವಂತಿಲ್ಲ. ಏಕೆಂದರೆ ಇಂಥದ್ದೊಂದು ಆದೇಶವನ್ನು ಹೊರಡಿಸಿರುವುದು ತೆಲಂಗಾಣ ಸರ್ಕಾರ. ಗಣೇಶ ವಿಸರ್ಜನೆಯ ಮೆರವಣಿಗೆ ಹಿನ್ನೆಲೆಯಲ್ಲಿ ಅದು ಅಲ್ಲಿನ ಕೆಲವು ನಗರಗಳಲ್ಲಿ ನಾಳೆ ಸರ್ಕಾರಿ ರಜೆ ಎಂದು ಘೋಷಿಸಿ ಆದೇಶ ಹೊರಡಿಸಿದೆ.

ಹೈದರಾಬಾದ್, ಸಿಕಂದರಾಬಾದ್, ರಂಗಾರೆಡ್ಡಿ, ಮೆಡ್ಚಲ್​-ಮಲ್ಕಜ್​ಗಿರಿ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಸೆ. 9ರಂದು ಸರ್ಕಾರಿ ರಜೆ ಇರಲಿದೆ. ನಾಳೆಯ ರಜೆಗೆ ಪರ್ಯಾಯವಾಗಿ ಸೆ. 12ರಂದು ಕೆಲಸದ ದಿನವಾಗಿರಲಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net