2021ರ ಜುಲೈ ಒಳಗೆ 25 ಕೋಟಿ ಜನರಿಗೆ ಕರೊನಾ ಲಸಿಕೆ; ಸರ್ಕಾರದ ಗುರಿ..

China- corona vaccine
Published on

ನವದೆಹಲಿ: ಜಗತ್ತಿನಾದ್ಯಂತ ಕಾಡುತ್ತಿರುವ ಕರೊನಾ ಸೋಂಕನ್ನು ಎದುರಿಸಲು ಬೇರೆ ಬೇರೆ ದೇಶಗಳಲ್ಲಿ ಲಸಿಕೆ ಸಂಶೋಧನೆ ನಡೆಯುತ್ತಿರುವ ಮಧ್ಯೆ ಭಾರತ ತನ್ನದೊಂದು ಗುರಿ ಇರಿಸಿಕೊಂಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಮಾಹಿತಿ ಹೊರಹಾಕಿದ್ದಾರೆ.

'ಸಂಡೇ ಸಂವಾದ್​' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತ, ಕರೊನಾ ಲಸಿಕೆ ಬಗ್ಗೆ ವಿವರಿಸಿದರು. 2021ರ ಜುಲೈ ಒಳಗೆ 400 ರಿಂದ 500 ದಶಲಕ್ಷ ಕರೊನಾ ಲಸಿಕೆಗಳನ್ನು ಸುಮಾರು 25 ಕೋಟಿ ಜನರಿಗೆ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬರಿಗೂ ಕರೊನಾ ಲಸಿಕೆ ಕೊಡಿಸುವುದು ನಮ್ಮ ಆದ್ಯತೆ. ಕರೊನಾ ಲಸಿಕೆಯನ್ನು ಸಮರ್ಪಕವಾಗಿ ಹಂಚುವುದು ಕೇಂದ್ರ ಸರ್ಕಾರದ ಆದ್ಯತೆಗಳಲ್ಲೊಂದು ಎಂದು ಅವರು ಹೇಳಿದ್ದಾರೆ. ಹಾಗೆಯೇ ಎಲ್ಲರೂ ಕರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬುದಾಗಿ ಸಚಿವರು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net