ಸೆಲ್ಫಿ ವಿಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ; ಕಾರಣ ಮೇಲಧಿಕಾರಿಗಳು

nagarasabha 18 May 20
Published on

ಚಿತ್ರದುರ್ಗ: ವೇತನ ಕೊಡಲಿಲ್ಲ ಎಂಬ ಕಾರಣಕ್ಕೆ ಚಿತ್ರದುರ್ಗ ನಗರಸಭೆ ಎಸ್​ಡಿಎ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾವು ವಿಷ ಸೇವಿಸುತ್ತಿರುವುದನ್ನು ಸೆಲ್ಫಿ ವಿಡಿಯೋ ಮಾಡಿದ ಅವರು, ಮೇಲಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹರಿಹರ ಮೂಲದ ಶಶಿ (25) ಮೃತರು. ನಗರ ಸಭೆ ಕಚೇರಿಯ ಮೇಲ್ಭಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷದ ಬಾಟಲಿ ಹಿಡಿದು ಸೆಲ್ಫಿ ವಿಡಿಯೋ ಮಾಡಿದ ಅವರು, ಲಾಕ್​ಡೌನ್​ ಇದ್ದುದರಿಂದ ನನಗೆ ಕೆಲಸಕ್ಕೆ ಹಾಜರಾಗಲು ಆಗಿರಲಿಲ್ಲ. ಆದರೆ ನನ್ನ ಕಷ್ಟ ಅರ್ಥ ಮಾಡಿಕೊಳ್ಳದೆ ಸಂಬಳ ಕಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಸಸ್ಪೆಂಡ್ ಮಾಡಲು ಲೆಟರ್ ಕೂಡ ಸಿದ್ಧ ಪಡಿಸಿದ್ದಾರೆ. ಹೀಗಾದರೆ ನನ್ನ ತಂದೆ-ತಾಯಿಯನ್ನು ಸಾಕುವುದು ಹೇಗೆ ಅಳಲು ತೋಡಿಕೊಳ್ಳುತ್ತಲೇ ವಿಷ ಸೇವನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net