

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸ್ಥಾನಗಳಿಗೆ ಡಿ.4 ರಂದು ಚುನಾವಣೆ ನಿಗದಿಯಾಗಿದ್ದು, ಒಟ್ಟು 6 ಮಂದಿ ಕಣದಲ್ಲಿದ್ದಾರೆ.
ಕೊನೇ ದಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಅಜಯ್ಕುಮಾರ್, ಖಜಾಂಚಿ ಸ್ಥಾನಕ್ಕೆ ಮುರಳಿಮೋಹನ್ ಹಾಗೂ ರಾಜ್ಯಪರಿಷತ್ಗೆ ಕುಡಿಯುವನೀರು ಸರಬರಾಜು ಇಲಾಖೆಯ ಎನ್.ಶ್ರೀನಿವಾಸರೆಡ್ಡಿ ನಾಮಪತ್ರ ಸಲ್ಲಿಸಿದರು.
ಚುನಾವಣೆಯಲ್ಲಿ ಹಾಲಿ ಜಿಲ್ಲಾಧ್ಯ ಜಿ.ಸುರೇಶ್ಬಾಬು ಬಣದಿಂದ ಪರಿಶಿಷ್ಟ ಜಾತಿ ಮಹಿಳೆ ಪ್ರೇಮ ರಾಜು, ವಕ್ಕಲಿಗ ಸಮುದಾಯದಿಂದ ವೆಂಕಟಾಚಲಪತಿಗೌಡ, ಹಿಂದುಳಿದವರ್ಗದಿಂದ ಸ್ವತ@ ಅಧ್ಯರೇ ಕಣದಲ್ಲಿದ್ದು, ತಲಾ ಒಂದೊಂದು ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ.
ಅದೇ ರೀತಿ ಅಜಯ್ಕುಮಾರ್ ಬಣದಿಂದ ಪರಿಶಿಷ್ಟ ಜಾತಿಯಿಂದ ಅಜಯ್ಕುಮಾರ್, ಹಿಂದುಳಿದ ವರ್ಗಗಳಿಂದ ವಿ.ಮುರಳಿಮೋಹನ್, ವಕ್ಕಲಿಗ ಸಮುದಾಯದಿಂದ ಎನ್.ಶ್ರೀನಿವಾಸರೆಡ್ಡಿ ಅವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಾಗಿದೆ.
ನ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 29ರಂದು ಉಮೇದುವಾರಿಕೆ ವಾಪಸ್ ಪಡೆದುಕೊಳ್ಳಬಹುದು. ಎಲ್ಲ ಐದು ತಾಲೂಕು ಅಧ್ಯಕ್ಷರ 5 ಮತ ಹಾಗೂ ಜಿಲ್ಲಾ ಕೇಂದ್ರದಲ್ಲಿ 66 ನಿರ್ದೇಶಕರು ಸೇರಿ ಒಟ್ಟು 71 ಮತದಾರರು ಮತ ಚಲಾಯಿಸಲಿದ್ದಾರೆ.
ಸಂದ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್, ನಿರ್ದೇಶಕರಾದ ಮುನೇಗೌಡ, ರಾವೇಂದ್ರ, ಚೌಡಪ್ಪ, ಅನಿಲ್, ಬೈರೇಗೌಡ ಮತಿತರರು ಹಾಜರಿದ್ದರು.
* ನೌಕರರ ಸ್ನೇಹಿ ಕೆಲಸಕ್ಕೆ ಒತ್ತು
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಕಾಂಕ್ಷಿ ಅಜಯ್ಕುಮಾರ್, ಸಂವನ್ನು ನೌಕರರ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕೇಂದ್ರದ ನೌಕರರ ಭವನವನ್ನು ಈಗಾಗಲೇ ಕೆಡವಲಾಗಿದೆ. ಆಯ್ಕೆಯಾದ ಕೂಡಲೇ ಮೊದಲ ಆದ್ಯತೆಯಾಗಿ ಮಾದರಿ ನೌಕರರ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸಂವನ್ನು ಇಡೀ ರಾಜ್ಯಕ್ಕೆ ಮಾದರಿ ಸಂವನ್ನಾಗಿ ರೂಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯರು ಒಂದೆಡೆ ಸೇರಿ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ನಮ್ಮದೇನು ತಕರಾರಿಲ್ಲ. ಚುನಾವಣೆ ನಡೆದರೆ ನಾವು ಪ್ರಬಲವಾಗಿ ಹೋರಾಟ ಮಾಡುತ್ತೇವೆ, ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಶಾಸಕರಿಗೆ ಸಹಕಾರ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಸನ್ಮಾನಿಸಿದೆವು. ಅದೇ ಸಂದರ್ಭದಲ್ಲಿ ನಾವೂ ಪದಾಧಿಕಾರಿಗಳಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಮ್ಮನ್ನು ಕರೆಸಿ ಅಭಿನಂದಿಸಿದ್ದು, ಯಾವುದೇ ಕಾರಣಕ್ಕೂ ಅವರು ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಆದರೆ, ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ಯಾರೇ ಅಧ್ಯಕ್ಷರಾದರೂ ರೈತರು, ಬಡವರಿಗೆ ಸಹಕಾರ ಮಾಡುವಂತೆ ತಿಳಿಸಿದ್ದಾರೆ ಎಂದು ಹೇಳಿದರು.