ವಿಜಿಲೆನ್ಸ್​ ದಾಳಿಗೆ ಹೆದರಿ 500 ರೂ. ಬಂಡಲ್​ಗಳನ್ನು ಕಿಟಕಿಯಿಂದ ಹೊರ ಎಸೆದ ಸರ್ಕಾರಿ ನೌಕರ!| Vigilance Raid

dk - 2025-05-30T124042.039 (1)
Published on

Vigilance Raid: ವಿಜಿಲೆನ್ಸ್​(ವಿಚಕ್ಷಣ) ಅಧಿಕಾರಿಗಳ ದಾಳಿಗೆ ಭಯಭೀತಿಗೊಂಡ ಸರ್ಕಾರಿ ನೌಕರನೊಬ್ಬ ಹಣದ ಕಂತಿನ ನೋಟುಗಳನ್ನು ಕಿಟಕಿ ಮೂಲಕ ಎಸೆದಿರುವ ಘಟನೆ ಓಡಿಸ್ಸಾದ ಶುಕ್ರವಾರ ನಡೆದಿದೆ.

ಭುವನೇಶ್ವರದ ಗ್ರಾಮೀಣ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್​ (ಯೋಜನಾ ರಸ್ತೆಗಳು) ಬೈಕುಂಠ ನಾಥ್ ಸಾರಂಗಿ ಅವರ ಮನೆ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ ಮಾಡಿದ ವಿಜಿಲೆನ್ಸ್​(ವಿಚಕ್ಷಣ) ಅಧಿಕಾರಿಗಳು 2.1 ಕೋಟಿ ರೂ.ಗಳಿಗೆ ಹೆಚ್ಚು ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಇತ 500 ರೂ. ಬಂಡಲ್​​ ನೋಟುಗಳನ್ನು ಕಿಟಕಿ ಮೂಲಕ ಎಸೆದಿದ್ದಾನೆ.

ಕಾರ್ಯಾಚರಣೆಯ ಸಮಯದಲ್ಲಿ, ಸಾರಂಗಿ ಭುವನೇಶ್ವರದಲ್ಲಿರುವ ತಮ್ಮ ಫ್ಲಾಟ್‌ನ ಕಿಟಕಿಯಿಂದ 500 ರೂ. ನೋಟುಗಳ ಬಂಡಲ್​ಗಳನ್ನು ಎಸೆದು ಹಣವನ್ನು ವಿಲೇವಾರಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. "ವಿಜಿಲೆನ್ಸ್ ಅಧಿಕಾರಿಗಳನ್ನು ನೋಡಿದ ಸಾರಂಗಿ ತಮ್ಮ ಫ್ಲಾಟ್‌ನ ಕಿಟಕಿಯ ಮೂಲಕ 500 ರೂ. ನೋಟುಗಳ ಬಂಡಲ್‌ಗಳನ್ನು ಎಸೆದರು. ವಿಜಿಲೆನ್ಸ್‌ನ ಶೋಧ ತಂಡವು ಸಾಕ್ಷಿಗಳ ಸಮ್ಮುಖದಲ್ಲಿ ಅದನ್ನು ವಶಪಡಿಸಿಕೊಂಡಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭುವನೇಶ್ವರದ ದುಂಡುಮಾದಲ್ಲಿರುವ ಫ್ಲಾಟ್‌ನಿಂದ ಸುಮಾರು 1 ಕೋಟಿ ರೂ., ಅಂಗುಲ್ ಜಿಲ್ಲೆಯ ಕರಡಗಾಡಿಯಾದಲ್ಲಿರುವ ಅವರ ಎರಡು ಅಂತಸ್ತಿನ ನಿವಾಸದ ಸುತ್ತಲೂ 1.1 ಕೋಟಿ ರೂ. ಪತ್ತೆಯಾಗಿದೆ. ದಾಳಿ ಮುಂದುವರೆದಿದ್ದು, ಸಾರಂಗಿಯವರ ಆಸ್ತಿಗಳ ವಿವರವಾದ ಮೌಲ್ಯಮಾಪನ ನಡೆಯುತ್ತಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net