

Hanging: ಖಿನ್ನತೆಯಿಂದ ಬಳಲುತ್ತಿದ್ದ ಸರ್ಕಾರಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಲಕ್ನೋ ನಗರದ ಇಂದಿರಾ ನಗರ ಕಾಲೋನಿಯಲ್ಲಿ ನಡೆದಿದೆ.
ರಾಜ್ಯ ನಗರಾಭಿವೃದ್ಧಿ ಸಂಸ್ಥೆ (ಸುಡಾ)ಯ ಯೋಜನಾ ವ್ಯವಸ್ಥಾಪಕ ಸುಧಾಕಾಂತ್ ಮಿಶ್ರಾ (59) ಮೃತ ಎಂದು ಗುರುತಿಸಲಾಗಿದೆ. ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಘಟನೆ ನಡೆದಾಗ, ಅವರ ಪತ್ನಿ ಇನ್ನೊಂದು ಕೋಣೆಯಲ್ಲಿದ್ದರು ಮತ್ತು ಅವರ ಮಗ ಮನೆಯಲ್ಲಿ ಇರಲಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ನಿವೃತ್ತರಾಗಲಿದ್ದರು. ಕಳೆದ ಹಲವಾರು ತಿಂಗಳುಗಳಿಂದ ಖಿನ್ನತೆಯಲ್ಲಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)