ಕತಾರ್​ನ ಕರ್ನಾಟಕ ಸಂಘದ ಆಡಳಿತ ಸಮಿತಿಗೆ ಮೈರ್ಪಾಡಿ ನಾಗೇಶ್​ ರಾವ್ ನೂತನ ಅಧ್ಯಕ್ಷ; ಅವಿರೋಧ ಆಯ್ಕೆ

Qutar 1 8 March 20
Published on

ಕತಾರ್​ನಲ್ಲಿನ ಕರ್ನಾಟಕ ಸಂಘಕ್ಕೆ 2020ನೇ ಸಾಲಿನ ನೂತನ ಆಡಳಿತ ಸಮಿತಿ ರಚನೆಯಾಯಿತು. ಈ ಸಂಘ ಕಳೆದ 20 ವರ್ಷಗಳಿಂದಲೂ ಸಂಸ್ಕೃತಿ ರಕ್ಷಣೆ, ಸೇವೆಯಲ್ಲಿ ತೊಡಗಿಕೊಂಡಿದೆ. 2020-21ರ ಸಾಲಿನ ಆಡಳಿತ ಸಮಿತಿಗೆ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.

ಕರ್ನಾಟಕ ಸಂಘ, ಕತಾರ್​ನ ನೂತನ ಅಧ್ಯಕ್ಷರಾಗಿ ಮೈರ್ಪಾಡಿ ನಾಗೇಶ್​ ರಾವ್​ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಬೋಲೂರ್​ ಮತ್ತು ಪ್ರಧಾನಕಾರ್ಯದರ್ಶಿಯಾಗಿ ಮುರಳಿಧರ್ ರಮನಾಥ್ ರಾವ್ ಆಯ್ಕೆಯಾಗಿದ್ದಾರೆ.

ಉಳಿದಂತೆ ನೂತನ ಅಧಿಕಾರಿಗಳ ಪಟ್ಟಿ ಹೀಗಿದೆ
ಖಜಾಂಚಿ: ಲಕ್ಕಪ್ಪ ಲಕ್ಕೇಗೌಡ
ಸಾಂಸ್ಕೃತಿಕ ಕಾರ್ಯದರ್ಶಿ: ಅಕ್ಷಯಾ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ: ಸಂಜಯ್ ಕುದರಿ
ಜಂಟಿ ಕಾರ್ಯದರ್ಶಿ ಮತ್ತು ಕನ್ನಡ ಸಂಬಂಧಿತ ಸಂಚಾಲಕರು: ಕಿಶೋರ್.ವಿ.
ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸಂಚಾಲಕರು: ಕುಮಾರಸ್ವಾಮಿ ಸಿ.ಆರ್.
ಮಹಿಳಾ ಸಂಚಾಲಕರು: ಸುಶೀಲಾ ಸುನೀಲ್​
ಮಕ್ಕಳು ಮತ್ತು ವಿಶೇಷ ಅವಶ್ಯಕತೆಗಳ ಸಂಚಾಲಕರು: ರಶ್ಮಿ ಜಯರಾಮ್​ 
ಸದಸ್ಯರುಮತ್ತು ನಿರ್ದೇಶಾಂಕ ಸಂಚಾಲಕರು: ನೂರ್​ಅಹ್ಮದ್​

ಪ್ರಸಕ್ತ ಸಮಿತಿಯ ಅಧ್ಯಕ್ಷರಾಗಿರುವ ನಾಗೇಶ್ ರಾವ್ ಅವರು ಕಳೆದ 29 ವರ್ಷಗಳಿಂದಲೂ ಕತಾರ್​ನಲ್ಲಿ ವಾಸವಾಗಿದ್ದಾರೆ. ಕರ್ನಾಟಕ ಸಂಘದ ಸಕ್ರಿಯ ಸದಸ್ಯರಲ್ಲಿ ಓರ್ವರು. ಇವರು ಮೂಲತಃ ಪುತ್ತೂರಿನವರಾಗಿದ್ದು ಕತಾರ್​ನಲ್ಲಿ ಔಷಧೀಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಇದ್ದ ಸಮಿತಿಯನ್ನು ಅದರ ಅಧ್ಯಕ್ಷರಾಗಿದ್ದ ವೆಂಕಟ ರಾಯರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಕೆ.ಎಂ.ವರ್ಘೀಸ್​ ಅವರ ನೇತೃತ್ವದಲ್ಲಿ ಫೆ.28ರಂದು ವಿಸರ್ಜಿಸಲಾಗಿತ್ತು.

ಕರ್ನಾಟಕ ಸಂಘದ ಪರಿಚಯ
ಕತಾರ್​ನಲ್ಲಿರುವ ಕರ್ನಾಟಕ ಸಂಘ ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗಸಂಸ್ಥೆಯಾಗಿದೆ. ಕತಾರ್​ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಭಾರತೀಯರ ಒಂದು ವೈವಿಧ್ಯಮಯ ಸಂಘಟನೆಯಾಗಿದ್ದು ಸುಮಾರು 800 ಜನ ಸದಸ್ಯರು ಇದ್ದಾರೆ. ಸಾಂಸ್ಕೃತಿಕ, ಕ್ರೀಡೆ ಮತ್ತು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net