ವಿಮಾನದಲ್ಲಿ ಡಾಕ್ಟರ್ ಕರ್ತವ್ಯ ನಿರ್ವಹಿಸಿದ ರಾಜ್ಯಪಾಲರು; ತುರ್ತು ಚಿಕಿತ್ಸೆ ನೀಡಿ ನೆರವು..

Governer
Published on

ದೆಹಲಿ: ದೆಹಲಿ - ಹೈದರಾಬಾದ್ ನಡುವೆ ಸಂಚರಿಸುವ ವಿಮಾನ ಶನಿವಾರ ವಿಶೇಷ ಘಟನೆಗೆ ಸಾಕ್ಷಿಯಾಯಿತು. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲಿದ ಸಹ ಪ್ರಯಾಣಿಕನಿಗೆ ತಕ್ಷಣವೇ ತುರ್ತು ಚಿಕಿತ್ಸೆ ನೀಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಆತನ ಪ್ರಾಣ ಉಳಿಸಿದ್ದಾರೆ.

ರಾಜ್ಯಪಾಲೆ ವಾರಣಾಸಿಯಿಂದ ದೆಹಲಿ ಮಾರ್ಗವಾಗಿ ಹೈದರಾಬಾದ್‌ಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಮಾನ ಪ್ರಯಾಣದಲ್ಲಿ ಸಹ ಪ್ರಯಾಣಿಕನ ಆರೋಗ್ಯ ಏರುಪೇರಾಗಿದೆ. ತಕ್ಷಣವೇ ಕ್ಯಾಬಿನ್ ಕ್ರ್ಯೂ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ.

ಅವರು ವಿಮಾನದಲ್ಲಿ ಪ್ರಯಾಣಿಕರೊಬ್ಬರ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ, ವೈದ್ಯರ ನೆರವಿನ ಅಗತ್ಯವಿದೆ ಎಂದು ಘೋಷಣೆ ಮಾಡಿದ್ದಾರೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ರಾಜ್ಯಪಾಲೆ ಸೌಂದರರಾಜನ್ ತುರ್ತು ಚಿಕಿತ್ಸೆ ನೀಡಿದ್ದಾರೆ.

ವಿಮಾನದಲ್ಲಿದ್ದ ವೈದ್ಯಕೀಯ ಸಲಕರಣೆಗಳಿಂದ ರಾಜ್ಯಪಾಲರು ಪ್ರಯಾಣಿಕನ ಪಲ್ಸ್, ಬಿಪಿ ಪರೀಕ್ಷಿಸಿದ್ದಾರೆ. ಸೂಕ್ತ ಔಷಧ ನೀಡಿದ ಕೆಲ ಹೊತ್ತಲ್ಲೇ ಪ್ರಯಾಣಿಕ ಚೇತರಿಸಿಕೊಂಡಿದ್ದಾರೆ. ರಾಜ್ಯಪಾಲೆ ಸೌಂದರರಾಜನ್ ರಾಜಕೀಯ ಪ್ರವೇಶಕ್ಕೂ ಮೊದಲು ವೈದ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net