

ನವದೆಹಲಿ: ಎಷ್ಟೋ ಬಾರಿ ಆಹಾರ ತಯಾರಿಕೆಯೂ ಕಲೆಯಾಗಿ ಮಾರ್ಪಾಡಾಗುತ್ತದೆ. ಹೊಟ್ಟೆ ತುಂಬಿಸಿಕೊಳ್ಳುವ ಆಹಾರವನ್ನು ಕೂಡ ಕಲಾತ್ಮಕವಾಗಿ ರೂಪಿಸಿ ಜಗತ್ಪ್ರಸಿದ್ಧರಾದ ಸಾಕಷ್ಟು ಬಾಣಸಿಗರಿದ್ದಾರೆ. ಸಾಮಾನ್ಯವಾಗಿ ಚಾಕಲೇಟ್ ಹಾಗೂ ಕೇಕ್ ತಯಾರಕರು ಅವುಗಳನ್ನು ವಿವಿಧ ವಿನ್ಯಾಸಗಳಲ್ಲಿ, ಆಕೃತಿಗಳಲ್ಲಿ ರೂಪಿಸುತ್ತಾರೆ. ಲಾಸ್ ವೇಗಾಸ್ನ ಆಮ್ಹರಿ ಗುಯ್ಚನ್ ಎಂಬ ಬಾಣಸಿಗರೊಬ್ಬರು ಚಾಕಲೇಟ್ನಲ್ಲಿ ಗೊರಿಲ್ಲದ ಗೊಂಬೆಯನ್ನು ನಿರ್ವಿುಸಿದ್ದಾರೆ. ನಾಲ್ಕು ಅಡಿ ಎತ್ತರದ ಈ ಗೊರಿಲ್ಲ ಗೊಂಬೆಯ ತಯಾರಿಯಲ್ಲಿ ಹಾಲು ಹಾಗೂ ಡಾರ್ಕ್ ಚಾಕಲೇಟ್ಗಳನ್ನು ಬಳಸಲಾಗಿದೆ. ಈ ಗೊಂಬೆಯನ್ನು ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.