ಶಾಸಕ ಯತ್ನಾಳ್‌ಗೆ ನಿರಾಳ : ನಕಲಿ ಮತದಾನ ಆರೋಪದ ಅರ್ಜಿ ವಜಾ

highcourt
Published on

ಬೆಂಗಳೂರು: ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ ಅರ್ಜಿದಾರರಿಗೆ 1 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಯತ್ನಾಳ್ ಆಯ್ಕೆ ಅಸಿಂಧಗೊಳಿಸುವಂತೆ ಕೋರಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್  ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಕಾಯ್ಡಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಕೆ.ಎಸ್ ಹೇಮಲೇಖಾ ಗೌಡ ಅವರ ಏಕಸದಸ್ಯ ಪೀಠ ಶುಕ್ರವಾರ ಪ್ರಕಟಿಸಿದೆ.

ಯತ್ನಾಳ ಪರ ವಾದ ಮಂಡಿಸಿದ ವಕೀಲರು, ಯತ್ನಾಳ್ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಆದರೆ, ಆರ್‌ಪಿ ಕಾಯ್ದೆಯಡಿ ಚುನಾವಣಾ ತಕರಾರು ಅರ್ಜಿ ದಾಖಲಿಸಬೇಕಾದ ವೇಳೆ ನಿರ್ದಿಷ್ಟ ವಿಧಾನ ಅನುಸರಿಸಬೇಕು.

ಈ ಬಗ್ಗೆ ಹಲವು ಬಾರಿ ಹೇಳಲಾಗಿದೆ. ನ್ಯಾಯಪೀಠ ಸಾಕಷ್ಟು ಅವಕಾಶಗಳನ್ನು ಕೂಡ ಅರ್ಜಿದಾರರಿಗೆ ನೀಡಿದೆ. ಸುಪ್ರೀಂ ಕೋರ್ಟ್ 2014 ರ ಸಿ.ಪಿ. ಜೋನ್ ಮತ್ತು ಎಂ. ಬಾಬು ಪಲ್ಲಿಸ್ಸೆರಿ ಅವರ ಪ್ರಕರಣದಲ್ಲಿ ಸೂಕ್ತ ಕಾಲಾವಕಾಶ ನೀಡಿದ ಬಳಿಕವೂ ಚುನಾವಣಾ ತಕರಾರು ಅರ್ಜಿಯಲ್ಲಿ ಇರಬೇಕಾದ ಅಂಶಗಳನ್ನು ಉಲ್ಲೇಖಿಸುವಲ್ಲಿ ವಿಲವಾದ ಹಿನ್ನೆಲೆ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇಲ್ಲಿಯೂ ಅದೇ ರೀತಿ ನಡೆದಿದೆ. ಹಾಗಾಗಿ ವಿಚಾರಣೆಯನ್ನು ಇಲ್ಲಿಗೆ ಕೈ ಬಿಟ್ಟು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net