ಈ ತಿಂಗಳಾಂತ್ಯದವರೆಗೆ ಗೂಗಲ್​ ಮೀಟ್​ ಧಾರಾಳವಾಗಿ ಬಳಸಿ.. ಆಮೇಲೆ...

Googel meet
Published on

ಕ್ಯಾಲಿಫೋರ್ನಿಯಾ: ಕರೊನಾ ದಾಳಿ ಇಟ್ಟ ಕೆಲವೇ ದಿನಗಳಲ್ಲಿ ವರ್ಕ್​ ಫ್ರಮ್​ ಹೋಮ್​, ಆನ್​ಲೈನ್​ ಕ್ಲಾಸ್​, ವಿಡಿಯೋ ಕಾನ್ಫರೆನ್ಸ್​ ಮುಂತಾದ ಅನುಕೂಲಕ್ಕಾಗಿ ಗೂಗಲ್​ ಕಂಪನಿ ಗೂಗಲ್​ ಮೀಟ್​ ಎಂಬ ವಿಡಿಯೋ ಪ್ಲ್ಯಾಟ್​ಫಾರ್ಮ್​ ವ್ಯವಸ್ಥೆ ಕಲ್ಪಿಸಿತ್ತು.

ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಉದ್ಯಮಿಗಳು ಮುಂತಾದವರೆಲ್ಲರಿಗೂ ತುಂಬಾ ಅನುಕೂಲವಾಗಿತ್ತು. ಗೂಗಲ್​ ಮೀಟ್​ ಬಳಸಿಕೊಂಡು ಗಂಟೆಗಟ್ಟಲೆ ಪ್ರಯೋಜನ ಪಡೆದವರಿದ್ದರು.

ಆದರೆ ಇದೀಗ ಗೂಗಲ್​ ಮೀಟ್​ನಲ್ಲಿ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇರಲು ಹಲವರು ಸ್ವಲ್ಪ ಯೋಚನೆ ಮಾಡುವಂತಾಗಿದೆ. ಕಾರಣ, ಸದ್ಯದಲ್ಲೇ ಗೂಗಲ್​ ಮೀಟ್​ ಉಚಿತ ವ್ಯವಸ್ಥೆ ಕೂಡ ನಿಯಮಿತವಾಗಲಿದೆ. ಅಂದರೆ ಸೆ. 30ರ ಬಳಿಕ ಗೂಗಲ್​ ಮೀಟ್​ನಲ್ಲಿ ಒಂದು ಗಂಟೆ ಕಾಲ ಮಾತ್ರ ಉಚಿತವಾಗಿ ವಿಡಿಯೋ ಚಾಟ್​ ಮಾಡಬಹುದು. ಒಂದು ಗಂಟೆ ನಂತರದ ಬಳಕೆಗೆ ಪೇಯ್ಡ್​ ವ್ಯವಸ್ಥೆ ಇರಲಿದೆ ಎಂಬುದು ಸಂಸ್ಥೆಯ ಮೂಲಗಳಿಂದ ಬಹಿರಂಗಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net