

ನವದೆಹಲಿ: ರಾಷ್ಟ್ರದಲ್ಲಿ ನಿತ್ಯ ಲೆಕ್ಕ ಪ್ರಕಾರ ಸರಕುಗಳನ್ನು ತಂದು ಮಾರಿಕೊಂಡು ಜೀವನ ಸಾಗಿಸುವ ಬೀದಿ ವ್ಯಾಪಾರಿಗಳಿಗೆ ಸಾಲ ಬೇಕೆಂದರೆ ಬ್ಯಾಂಕ್ ಅಥವಾ ಇತರೆ ಫೈನಾನ್ಸ್ ಕಂಪೆನಿಗಳಿಗೆ ಅಲೆಯುವ ಪರಿಸ್ಥಿತಿ ಇದೆ.
ಆದರೆ ಈ ತೊಂದರೆಯಿಂದ ವ್ಯಾಪಾರಿಗಳನ್ನು ಪಾರುಮಾಡಲು ಪ್ರಮುಖ ಟೆಕ್ ದಿಗ್ಗಜ ಗೂಗಲ್ ಪ್ರಮುಖ ತೀರ್ಮಾನ ತೆಗೆದುಕೊಂಡಿದೆ. ತನ್ನ ಯುಪಿಐ ಪೇಮೆಂಟ್ಸ್ ಫ್ಲಾಟ್ಫಾರಂ ಗೂಗಲ್ ಪೇ ಮುಖಾಂತರ ಸಾಲ ಒದಗಿಸಲು ಸಿದ್ಧವಾಗಿದೆ.
ನವದೆಹಲಿಯಲ್ಲಿ ಗೂಗಲ್ ನ 9ನೇ ಗೂಗಲ್ ಫಾರ್ ಭಾರತ್ ವಾರ್ಷಿಕೋತ್ಸವದಲ್ಲಿ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರ ಭಾಗವಾಗಿ ಕಂಪನಿಯು ಭಾರತದ ವ್ಯಾಪಾರಿಗಳಿಗೆ ಈ ಶುಭವಾರ್ತೆ ತಿಳಿಸಿದೆ. ಲೋನ್ಗಳು 10,000 ರೂ.ನಿಂದ 1 ಲಕ್ಷ ರೂ.ವರೆಗೆ ಗೂಗಲ್ ಪೇ ಮೂಲಕ ಮರುಪಾವತಿ ಅವಧಿಯು 7 ದಿನದಿಂದ 12 ತಿಂಗಳು ಇರುತ್ತದೆ.
ಮರುಪಾವತಿಗೆ ನಿತ್ಯ, ತಿಂಗಳಿಗೊಮ್ಮೆ ಅವಕಾಶವಿರುತ್ತದೆ. ಇದರಲ್ಲಿ ಡೇಟಾ ಗೌಪ್ಯತೆ, ಭದ್ರತೆ, ಒಪ್ಪಿಗೆ ಮತ್ತು ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಗೂಗಲ್ ಪೇನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.