

ಉತ್ತರಪ್ರದೇಶ: ಲಕ್ನೋದಲ್ಲಿ ಬಿಜೆಪಿ ಶಾಸಕರೊಬ್ಬರ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ಅದರಲ್ಲಿ ವಾಕಿಸ್ತಾನದ ಧ್ವಜವನ್ನು ಪೋಸ್ಟ್ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಬರೆಯಲಾಗಿತ್ತು. ಅಷ್ಟೇ ಅಲ್ಲ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಫೋಟೋದ ಮೇಲೆ ಅಕ್ಷೇಪಾರ್ಹ ಕಾಮೆಂಟ್‌ಗಳನ್ನು ಕೂಡ ಮಾಡಲಾಗಿದೆ. ಈ ಸಂಬಂಧ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ.
ನಿನ್ನೆ, ಹ್ಯಾಕರ್ಗಳು ಲಕ್ನೋ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ನೀರಜ್ ಬೋರಾ ಅವರ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ಅದರಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿದ್ದರು. ಅಷ್ಟೇ ಅಲ್ಲ ಸಿಎಂ ಯೋಗಿ ಅವರ ಫೋಟೋ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳು ಕೂಡ ಬಂದಿದ್ದವು, ನಂತರ ಶಾಸಕ ನೀರಜ್ ಬೋರಾ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿವಾದಾತ್ಮಕ ಪೋಸ್ಟ್ ಹಾಕಿದ ಹ್ಯಾಕರ್ಸ್
ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಡಾ.ನೀರಜ್ ಬೋರಾ ಅವರ ಈ ವೆಬ್ಸೈಟ್ ಅನ್ನು ಗುರಿಯಾಗಿಟ್ಟುಕೊಂಡು ವಿವಾದಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಆದರೆ ಇದು ಮೊದಲ ಪ್ರಕರಣವಲ್ಲ, ಈ ಹಿಂದೆಯೂ ಹಲವು ನಾಯಕರು ಹ್ಯಾಕರ್ಗಳಿಗೆ ಗುರಿಯಾಗಿದ್ದಾರೆ.
ಸದ್ಯ ಹ್ಯಾಕ್ ಆಗಿರುವ ವೆಬ್‌ಸೈಟ್ ಸರಿಪಡಿಸುವಂತೆ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಶಾಸಕ ನೀರಜ್ ಬೋರಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸೈಬರ್ ತಂಡದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಬ್‌ಸೈಟ್ ತೆರೆಯುವಾಗ, ಅದು ಪ್ರಸ್ತುತ ನಿರ್ವಹಣೆಯಲ್ಲಿದೆ' ಎಂದು ತೋರಿಸುತ್ತಿದೆ.