ಪ್ರತಿದಿನ ಕೇವಲ 1 ಗಂಟೆ ಕೆಲಸಕ್ಕೆ ಈ ಟೆಕ್ಕಿ ಪಡೆಯುತ್ತಿರುವ ಸಂಬಳ ಕೇಳಿದ್ರೆ ಬೆರಗಾಗೋದು ಖಂಡಿತ!

techie
Published on

ನವದೆಹಲಿ: ತಿಂಗಳಾಂತ್ಯದಲ್ಲಿ ಪಡೆಯುವ ಸಂಬಳಕ್ಕಾಗಿ ಪ್ರತಿದಿನ 8 ತಾಸು ಕೆಲಸ ಮಾಡುತ್ತಾರೆ ಮತ್ತು ಇನ್ನು ಕೆಲವರು 12 ಗಂಟೆಗಳ ಕಾಲ ದುಡಿಯುವವರೂ ಇರುತ್ತಾರೆ. ಆದರೆ, ಕೇವಲ 1 ಗಂಟೆ ಕೆಲಸ ಮಾಡಿ ವರ್ಷಕ್ಕೆ 1,50,000 ಡಾಲರ್​ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 1.2 ಕೋಟಿ ರೂ. ಸಂಪಾದನೆ ಮಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಗೂಗಲ್ ಕಂಪನಿಯ ಜೆನ್​ಝಡ್​ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬರು ಇದಕ್ಕೆ ತಾಜಾ ಉದಾಹರಣೆಯಾಗಿದ್ದಾರೆ.

ಟೆಕ್ಕಿಯ ಗುಪ್ತನಾಮ ಡೆವೊನ್ ಎಂದು ಗುರುತಿಸಲಾಗಿದೆ.ಇವರು ಒಂದು ದಿನವೂ ಪೂರ್ತಿ ದಿನ ಕೆಲಸ ಮಾಡಿಲ್ಲವಂತೆ. ಆದರೆ, ಉತ್ತಮ ಸಂಬಳ ಪಡೆಯುತ್ತಿರುವ ಡೆವೂನ್​, ವರ್ಷಾಂತ್ಯದಲ್ಲಿ ಬೋನಸ್​ ಸಹ ಪಡೆಯಲಿದ್ದಾರೆ. ಟೆಕ್​ ದೈತ್ಯ ಕಂಪನಿಯಲ್ಲಿ ಕೋಡ್​ ಬರೆಯುವುದೇ ಡೆವೂನ್​ ಅವರ ಕೆಲಸ. ಅಲ್ಲದೆ, ತಮ್ಮ ಟೆಕ್ಕಿ ಸ್ನೇಹಿತರ ಜತೆ ಸೇರಿ ಕಂಪನಿ ನಿರ್ಮಾಣ ಮಾಡಲು ಸಹ ಮುಂದಾಗಿದ್ದಾರೆ.

ಕಂಪನಿ ಕೊಡುವ ಕೆಲಸಕ್ಕೆ ಅನುಗುಣವಾಗಿ ಕೋಡ್​ ರಚನೆ ಮಾಡಿ, ಅದನ್ನು ಮ್ಯಾನೇಜರ್​ಗೆ ಕಳುಹಿಸಿಕೊಡುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಗೆ ಏಳುವ ಡೆವೂನ್​, ಸ್ನಾನ ಮಾಡಿ, ಬ್ರೇಕ್​ಫಾಸ್ಟ್​ ಮುಗಿಸಿಕೊಂಡು 11 ಗಂಟೆ ಅಥವಾ ಮಧ್ಯಾಹ್ನದ ವೇಳೆ ಕೆಲಸಕ್ಕೆ ಕೂರುತ್ತಾರೆ. ಕೇವಲ ಒಂದು ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಉಳಿದ ಸಮಯದಲ್ಲಿ ಡೆವೂನ್​ ತಮ್ಮ ಸ್ಟಾರ್ಟಪ್​ಗಾಗಿ ಕೆಲಸ ಮಾಡುತ್ತಾರೆ.

ಅಂದಹಾಗೆ 97 ಪ್ರತಿಶತ ಗೂಗಲ್​ ಉದ್ಯೋಗಿಗಳು ಟೆಕ್ ದೈತ್ಯವನ್ನು ಕೆಲಸ ಮಾಡಲು ಉತ್ತಮ ಸ್ಥಳವೆಂದು ಕರೆಯುತ್ತಾರೆ. ಸಾಮಾನ್ಯ ಯುಎಸ್​ ಕಂಪನಿಯ ಉದ್ಯೋಗಿಗಳ 57% ಜನರು ಇದನ್ನು ಹೇಳುತ್ತಾರೆ. ಗೂಗಲ್ ತನ್ನ ಪ್ರಯೋಜನಗಳ ಕಾರಣದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಉದ್ಯೋಗಿಗಳಿಗೆ ಬೈಸಿಕಲ್‌ಗಳು, ಜಿಮ್‌ ಮತ್ತು ಉಚಿತ ಊಟಗಳಿಂದ ತುಂಬಿರುವ ಚಮತ್ಕಾರಿ ಕ್ಯಾಂಪಸ್ ಮತ್ತು ಹೆಚ್ಚಿನ ಸಂಬಳದಿಂದಾಗಿ ಗೂಗಲ್​ ಒಳ್ಳೆಯ ಹೆಸರು ಮಾಡಿದೆ.

ಹೆಚ್ಚಿನ ಜನರು ಕೆಲಸ-ಜೀವನದ ಸಮತೋಲನ ಮತ್ತು ಪ್ರಯೋಜನಗಳ ಕಾರಣದಿಂದಾಗಿ ಗೂಗಲ್​ ಅನ್ನು ಆಯ್ಕೆ ಮಾಡುತ್ತಾರೆ. ನೀವು ಆ್ಯಪಲ್​ ಕಂಪನಿಯಲ್ಲಿ ಕೆಲಸ ಮಾಡಬಹುದು, ಆದರೆ ಆ್ಯಪಲ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ತನ್ನದೇಯಾದ ಮನವಿಯನ್ನು ಹೊಂದಿದೆ. ಅವರು ದೀರ್ಘಕಾಲ ಕೆಲಸ ಮಾಡುತ್ತಾರೆ. ಆದರೆ ಗೂಗಲ್​ನಲ್ಲಿ ಹೆಚ್ಚಿನ ಜನರು ಏನು ಮಾಡುತ್ತಿದ್ದಾರೆಂದು ಎಲ್ಲರಿಗು ತಿಳಿದಿದೆ ಎಂದು ಡೆವೂನ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net