Google AI | 7 ಭಾಷೆಗಳಲ್ಲಿ ಗೂಗಲ್ ಎಐ ಸರ್ಚ್

Google AI
Published on

Google AI: ಗೂಗಲ್ ತನ್ನ ಎಐ ಸರ್ಚ್ ಅನುಭವವನ್ನು ಭಾರತದಲ್ಲಿ ವಿಸ್ತರಿಸಿದ್ದು, ಬುಧವಾರ ಎಐ ಮೋಡ್ಅನ್ನು ಕನ್ನಡ, ಬಂಗಾಳಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಈ ಏಳು ಹೊಸ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಇದರಿಂದ ದೇಶದಾದ್ಯಂತ ಲಕ್ಷಾಂತರ ಬಳಕೆದಾರರು ತಮ್ಮ ಮೆಚ್ಚಿನ ಭಾಷೆಯಲ್ಲಿ ಸಂಕೀರ್ಣ ಪ್ರಶ್ನೆಗಳನ್ನು ಕೇಳಿ, ವಿವರವಾದ ಉತ್ತರಗಳನ್ನು ಪಡೆಯಲು ಸಾಧ್ಯವಾಗಲಿದೆ. ಈವರೆಗೆ ಎಐ ಮೋಡ್ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿತ್ತು.

ಈ ವಿಸ್ತರಣೆ ಗೂಗಲ್‌ನ ವಿಶೇಷ ಜೆಮಿನಿ ಮಾಡೆಲ್ ಮೂಲಕ ನಡೆಯುತ್ತಿದ್ದು, ಇದು ಕೇವಲ ಅನುವಾದ ಮಾಡುವುದಲ್ಲ, ಸ್ಥಳೀಯ ಭಾಷೆಗಳ ಸೂಕ್ಷ್ಮತೆಗಳನ್ನು ಹೋಲಿಕೆ, ಪ್ರಯಾಣ ಯೋಜನೆಗಳಂತಹ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಇದರ ಜೊತೆಗೆ, ಎಐ ಮೋಡ್‌ನೊಳಗೆ ಸರ್ಚ್ ಲೈವ್ ಎಂಬ ಹೊಸ ಫೀಚರ್ ಪರಿಚಯಿಸಲಾಗಿದೆ. ಇದು ಧ್ವನಿ ಮತ್ತು ಕ್ಯಾಮೆರಾ ಬಳಸಿ ಸರ್ಚ್‌ನೊಂದಿಗೆ ನೇರ ಸಂವಹನಕ್ಕೆ ಅವಕಾಶ ಕಲ್ಪಿಸುತ್ತದೆ. ಉದಾಹರಣೆಗೆ, ಉಪಕರಣಗಳನ್ನು ಕ್ಯಾಮೆರಾದಲ್ಲಿ ತೋರಿಸಿ 'ಇವುಗಳನ್ನು ಮ್ಯಾಚ್ ಹೇಗೆ ಮಾಡುವುದು? ಎಂದು ಕೇಳಬಹುದು. ಇದು ಶಾಲಾ-ಕಾಲೇಜು ಪ್ರಾಜೆಕ್ಟ್‌ಗಳು, ಸಮಸ್ಯೆ ಪರಿಹಾರ ಮತ್ತು ಪ್ರಯಾಣಕ್ಕೆ ಉಪಯುಕ್ತ. ಸರ್ಚ್ ಲೈವ್ ಮೊದಲು ಇಂಗ್ಲಿಷ್, ಹಿಂದಿಯಲ್ಲಿ ಲಭ್ಯವಾಗುತ್ತದೆ; ಗೂಗಲ್ ಆ್ಯಪ್ ತೆರೆದು ಸರ್ಚ್ ಬಾರ್ ಅಡಿ 'ಲೈವ್' ಐಕಾನ್ ಒತ್ತಿ ಅಥವಾ ಗೂಗಲ್ ಲೆನ್ಸ್‌ನಲ್ಲಿ ಲೈವ್‌ ಆಯ್ಕೆ ಮಾಡಿ ಇದನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net