BBK | ಜಾಲಿವುಡ್​ ಸ್ಟುಡಿಯೋ ರೀ ಓಪನ್​ಗೆ ಡಿಸಿಎಂ ಡಿಕೆಶಿ ಸೂಚನೆ; ಸ್ಪಂದಿಸಿದಕ್ಕಾಗಿ ಧನ್ಯವಾಧಗಳು ಎಂದ ಕಿಚ್ಚ ಸುದೀಪ್​

Dk Shivakumar sudeep
Published on

BBK: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಚಿತ್ರಿಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್​ ಸ್ಟುಡಿಯೋ ಸೀಲ್​ ತೆಗೆಯಲು ಸೂಚನೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ಗೆ ಕಾರ್ಯಕ್ರಮ ನಿರೂಪಕ, ನಟ ಕಿಚ್ಚ ಸುದೀಪ್​ ಧನ್ಯವಾಧಗಳನ್ನು ತಿಳಿಸಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಡಿಸಿಎಂ ಪೋಸ್ಟ್​ ರೀಟ್ವೀಟ್​ ಮಾಡಿರುವ ಸುದೀಪ್​, ಸಕಾಲಿಕ ಬೆಂಬಲ ನೀಡಿದ್ದಕ್ಕಾಗಿ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್​ ಸರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತ್ತೀಚೆಗೆ ನಡೆದ ಅವ್ಯವಸ್ಥೆ ಮತ್ತು ಗೊಂದಲದಲ್ಲಿ ಬಿಗ್​ಬಾಸ್​ ಭಾಗಿಯಾಗಿಲ್ಲ ಎನ್ನುವುದನ್ನು ನಿರೂಪಿಸಿದ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಈ ವಿಷಯದಲ್ಲಿ ಸಹಕಾರ ನೀಡಿದ ಮೊಹಮ್ಮದ್ ನಲಪಾಡ್ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net