ಎಲ್ಲರಲ್ಲೂ ಸೌಹಾರ್ದತೆ ಉತ್ತೇಜಿಸಲು ಸದ್ಭಾವನಾ ದಿನ

congress office sadbhavana day
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದ್ಭಾವನಾ ದಿನ ಮತ್ತು ದೇವರಾಜ ಅರಸ್ ಅವರ ಜನ್ಮದಿನದ ನಿಮಿತ್ತ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಎಚ್.ಎಸ್.ಸುಂದರೇಶ್, ಎಚ್.ಎಂ.ಚಂದ್ರಶೇಖರಪ್ಪ, ಎಸ್.ಪಿ.ಶೇಷಾದ್ರಿ, ಚಂದ್ರಶೇಖರ್, ಸ್ಟೆಲ್ಲಾ ಮಾರ್ಟಿನ್ ಇದ್ದರು.
Published on

ಶಿವಮೊಗ್ಗ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ನಿಮಿತ್ತ ಸದ್ಭಾವನಾ ದಿನವನ್ನು ಭಾನುವಾರ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಕಾಂಗ್ರೆಸ್ ಕಚೇರಿ, ಜಿಲ್ಲಾ ಸ್ಕೌಟ್ ಭವನ, ಕುವೆಂಪು ರಂಗಮಂದಿರ ಸೇರಿ ಜಿಲ್ಲೆಯ ಹಲವೆಡೆ ಆಚರಿಸಲಾಯಿತು.

ಎಲ್ಲ ಮತ, ಭಾಷೆ, ಪಂಥಗಳ ಜನರಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಿ ಸರ್ವರಲ್ಲೂ ಸದ್ಭಾವನೆ ಮೂಡಿಸಿ, ಹಿಂಸಾಚಾರ ತ್ಯಜಿಸುವಂತೆ ಪ್ರತಿಜ್ಞೆ ಮಾಡಲಾಯಿತು. ಡಿಸಿ ಕಚೇರಿಯಲ್ಲಿ ಎಡಿಸಿ ಸಿದ್ಧಲಿಂಗ ರೆಡ್ಡಿ ಅವರು ಕಚೇರಿಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ರೇಖಾ, ಕಿರಣ್, ದೀಪಕ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಕುವೆಂಪು ರಂಗಮಂದಿರದಲ್ಲಿ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸದ್ಭಾವನಾ ದಿನದ ನಿಮಿತ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಸ್ಕೌಟ್ ಭವನದಲ್ಲಿ ಜಿಲ್ಲಾಮಟ್ಟದ ಸದ್ಭಾವನಾ ದಿನ ಮತ್ತು ದೇವರಾಜ ಅರಸ್ ಅವರ ಜನ್ಮದಿನವನ್ನು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ಎಎಸ್‌ಓಸಿ ಭಾರತಿ ಡಾಯಸ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ ಮಾತನಾಡಿದರು.
ನಗರದ ವಿವಿಧ ಶಾಲೆಯ ಸುಮಾರು 70 ಸ್ಕೌಟ್ಸ್, ರೋವರ್ಸ್‌ ಮತ್ತು ರೇಂಜರ್ಸ್‌ಗಳು ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ ಅವಲಕ್ಕಿ, ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ, ಜಿಲ್ಲಾ ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಶಿವಶಂಕರ, ಕೃಷ್ಣಸ್ವಾಮಿ, ಮೀನಾಕ್ಷಮ್ಮ, ಹೇಮಲತಾ, ಚಂದ್ರಶೇಖರಯ್ಯ, ನಾಗಪ್ರಿಯಾ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದ್ಭಾವನಾ ದಿನ ಮತ್ತು ದೇವರಾಜ ಅರಸು ಜನ್ಮದಿನವನ್ನು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಎಸ್.ಪಿ.ಶೇಷಾದ್ರಿ, ಚಂದ್ರಶೇಖರ್, ಸ್ಟೆಲ್ಲಾ ಮಾರ್ಟಿನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net