ರಸ್ತೆಯಲ್ಲೇ ವಾಹನಕ್ಕೆ ಹೊತ್ತಿಕೊಂಡ ಬೆಂಕಿ; ಧಗಧಗಿಸಿದ ಜ್ವಾಲೆ..

accident
Published on

ಕಲಬುರಗಿ: ರಸ್ತೆಯಲ್ಲೇ ವಾಹನವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಜ್ವಾಲೆ ಧಗಧಗಿಸಿ ಉರಿದ ಪ್ರಕರಣವೊಂದು ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಕಲಬುರಗಿ ತಾಲೂಕಿನ ಶಿರನೂರು ಬಳಿ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಅಶೋಕ್​ ಲೇಲ್ಯಾಂಡ್​ನ ಟಾಟಾ ಏಸ್​ ಗೂಡ್ಸ್ ವಾಹನದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಾಹನಕ್ಕೆ ಜ್ವಾಲೆ ಆವರಿಸಿಕೊಂಡಿದೆ.

ಯಡ್ರಾಮಿಯಿಂದ ಕಲಬುರಗಿಗೆ ಬರುತ್ತಿದ್ದ ಈ ಗೂಡ್ಸ್ ವಾಹನವನ್ನು ಮುಗಳನಾಗಾಂ ಗ್ರಾಮದ ನಿವಾಸಿ ಚಾಲಕ ಭೀಮಾಶಂಕರ ಚಲಾಯಿಸುತ್ತಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನ ನಿಲ್ಲಿಸಿ ಅವರು ಇಳಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದಲ್ಲಿ ಸುಮಾರು 4 ಲಕ್ಷ ರೂ. ಮೌಲ್ಯದ ಸರಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net