

ಉತ್ತರಪ್ರದೇಶ: ಟ್ರ್ಯಾಕ್ಟರ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ ಬಂಸಿಪಹಾರ್‌ಪುರ-ರೂಪ್ ಬಾಸ್ ರೈಲು ವಿಭಾಗದಲ್ಲಿ ಗೂಡ್ಸ್ ರೈಲು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ರೈಲು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆರು ಜನರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೇ ತಿಂಗಳ 21ರಂದು ವಿಜಯನಗರದಲ್ಲಿ ಗೂಡ್ಸ್ ರೈಲು ಕೂಡ ಹಳಿತಪ್ಪಿತ್ತು. ಒಡಿಶಾ ರೈಲು ಅಪಘಾತದ ನಂತರ, ಸರಕು ರೈಲುಗಳು ಆಗಾಗ್ಗೆ ಹಳಿತಪ್ಪಿದವು. ಅಪಘಾತದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ