ಗೂಡ್ಸ್ ಆಟೋ ಡಿಕ್ಕಿ, ಬೈಕ್ ಸವಾರ ಸಾವು

accident-15
Published on

ಬೆಂಗಳೂರು: ಗೂಡ್ಸ್ ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.
ಭೂಪಸಂದ್ರದ ಆರ್.ಎಂ.ವಿ ೨ನೇ ಹಂತದ ನಿವಾಸಿ ದೇವರಾಜ್ (೪೩) ಮೃತ ಬೈಕ್ ಸವಾರ. ಜ.೧೮ರಂದು ರಾತ್ರಿ ೮.೩೦ರ ಸುಮಾರಿಗೆ ಭೂಪಸಂದ್ರ ಮುಖ್ಯರಸ್ತೆಯ ಮಾರುತಿ ಚಿಕನ್ ಅಂಗಡಿ ಕಡೆಯಿಂದ ಅತೀವೇಗವಾಗಿ ಬಂದ ಗೂಡ್ಸ್ ಆಟೋ ನಾಗಶೆಟ್ಟಿಹಳ್ಳಿ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ದೇವರಾಜ್‌ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ದೇವರಾಜ್ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಆಟೋ ಸಮೇತ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net