ಬಾಳೆಹೊನ್ನೂರು ಸುತ್ತಮುತ್ತ ಉತ್ತಮ ಮಳೆ

heavy rain
ಬಾಳೆಹೊನ್ನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ಮಳೆ ಸುರಿದಾಗ ಕಂಡುಬಂದ ದೃಶ್ಯ.
Published on

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.
ಮಧ್ಯಾಹ್ನ 1.45ಕ್ಕೆ ಆರಂಭಗೊಂಡ ಮಳೆ 4 ಗಂಟೆಯವರೆಗೂ ಧಾರಾಕಾರ ಸುರಿದಿದೆ. ಬಾಳೆಹೊನ್ನೂರು ಪಟ್ಟಣ ರಂಭಾಪುರಿ ಪೀಠ, ಕಡ್ಲೇಮಕ್ಕಿ, ಮಸೀದಿಕೆರೆ, ರೇಣುಕನಗರ, ವಾಟುಕೊಡಿಗೆ, ಇಟ್ಟಿಗೆ, ಸೀಗೋಡು, ಬಂಡಿಮಠ, ಹೊಳೆಬಾಗಿಲು, ಬನ್ನೂರು, ಅರಳೀಕೊಪ್ಪ, ತಲವಾನೆ, ಕುಂಬತ್ತಿ, ಸೀಕೆ, ಮುದುಗುಣಿ ಮತ್ತಿತರ ಕಡೆಗಳಲ್ಲಿಯೂ ಉತ್ತಮ ಮಳೆಯಾಗಿದೆ.
ಕೆಲವು ಕಡೆಗಳಲ್ಲಿ ಈಗಾಗಲೇ ಅಡಕೆ ಕೊಯ್ಲು ಆರಂಭಗೊಂಡಿದ್ದು ದಿಢೀರ್ ಆಗಿ ಸುರಿದ ಮಳೆಗೆ ಅಡಕೆ ಬೆಳೆಗಾರರು ಆತಂಕಗೊಂಡಿದ್ದಾರೆ. ಭಾನುವಾರ ಪಟ್ಟಣದಲ್ಲಿ ಸಂತೆಯ ದಿನವಾಗಿದ್ದು ವ್ಯಾಪಾರಿಗಳು, ಗ್ರಾಹಕರಿಗೆ ತೊಂದರೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net