ಬಿಸಿಯೂಟ ಸಿಬ್ಬಂದಿಗೆ ಸಿಹಿ ಸುದ್ದಿ: ಒಂದು ಸಾವಿರ ರೂ. ಗೌರವ ಧನ ಹೆಚ್ಚಳ

Midday Meals
Published on

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕರಿಗೆ ಮಾಸಿಕ ಒಂದು ಸಾವಿರ ರೂ. ಗೌರವ ಸಂಭಾವನೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2025-26ನೇ ಸಾಲಿನ ಬಜೆಟ್‌ನಲ್ಲಿ ಗೌರವಧನ ಹೆಚ್ಚಳ ಮಾಡುವುದಾಗಿ ೋಷಿಸಲಾಗಿತ್ತು. ಅದರಂತೆ ಆದೇಶವಾಗಿದ್ದು, ಜೂ.1ರಿಂದ ಆದೇಶವು ಅನ್ವಯವಾಗಲಿದೆ.

ಪ್ರಸ್ತುತ ಅಡುಗೆ ಸಿಬ್ಬಂದಿಗೆ 3,700 ಹಾಗೂ ಸಹಾಯಕರಿಗೆ 3,600 ರೂ. ಗೌರವ ಧನ ನೀಡಲಾಗುತ್ತಿದೆ. ಇದರ ಜತೆಗೆ ಒಂದು ಸಾವಿರ ರೂ. ಹೆಚ್ಚಳವಾಗಲಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯಕ್ತರು, ಜಿಪಂ ಸಿಇಒ ಮತ್ತು ತಾಪಂ ಇಒ ಅಧಿಕಾರಿಗಳು ಮಾಸಿಕ ಸೌರವ ಸಂಭಾವನೆಯನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ನೇರ ಸೌಲಭ್ಯ ವರ್ಗಾವಣೆ ಮೂಲಕ ತಲುಪುವಂತೆ ಸೂಚಿಸಲಾಗಿದೆ.

ಮಾಸಿಕ ಸಂಭಾವನೆಯ ಅನುದಾನವನ್ನು ರಾಜ್ಯ ಯೋಜನೆ ಕ್ಷೀರಭಾಗ್ಯ ಕಾರ್ಯಕ್ರಮದಲ್ಲಿ ನಿಗದಿಯಾಗಿರುವ 4,12,066 ಕೋಟಿ ರೂ.ಗಳಲ್ಲಿ ಪಾವತಿಸಬೇಕು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಅಡುಗೆ ಸಿಬ್ಬಂದಿ ಮತ್ತು ಸಹಾಯಕರು ಸೇರಿ ಒಟ್ಟು 1,26,103 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲಾ ಒಂದು ಸಾವಿರ ಹೆಚ್ಚಳ ಮಾಡಲು ಸರ್ಕಾರಕ್ಕೆ 12.61 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net