ಗುಣಮಟ್ಟ ಹಾಲು ಪೂರೈಕೆಯಿಂದ ಉತ್ತಮ ಆದಾಯ

komul harish
ಕೋಲಾರ ತಾಲೂಕು ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಡಿ.ವಿ.ಹರೀಶ್​, ಇಂಚರ ಗೋವಿಂದರಾಜು, ಡಾ.ಆರ್​.ಮಹೇಶ್​, ಎಸ್​.ನಾಗಪ್ಪ ಇದ್ದರು.
Published on

ಕೋಲಾರ: ಬಯಲು ಸೀಮೆ ಜಿಲ್ಲೆಗಳ ರೈತರ ಜೀವನಾಡಿ ಹೈನೋದ್ಯಮ ರೈತರಿಗೆ ಉತ್ತೇಜನ ನೀಡಲು ಪಣ ತೊಟ್ಟಿದ್ದು, ಉತ್ಪಾದಕರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಉತ್ತಮ ಆದಾಯ ಗಳಿಸಬೇಕು ಎಂದು ಕೋಮುಲ್​ ನಿರ್ದೇಶಕ ಡಿ.ವಿ.ಹರೀಶ್​ ಹೇಳಿದರು.

ತಾಲೂಕಿನ ತಿಮ್ಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬರದ ಸಮಯದಲ್ಲೂ ಉತ್ಪಾದಕರು ನಿರೀೆಗೂ ಮೀರಿ ಹಾಲು ಸಬರಾಜು ಮಾಡಿದ್ದಾರೆ. ರಾಜ್ಯದಲ್ಲಿಯೇ ಒಕ್ಕೂಟವು ಹಾಲು ಸರಬರಾಜಿನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನಕ್ಕೆ ಬರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಒಕ್ಕೂಟದಿಂದ ನಿರ್ದೇಶಕರಿಗೆ ವಿಶೇಷ ಅನುದಾನ 5 ಲಕ್ಷ ರೂ. ಇದ್ದು, ಇದನ್ನು ತಿಮ್ಮಸಂದ್ರ ಗ್ರಾಮಕ್ಕೆ ನೀಡುವಂತೆ ಮಾಡಲು ಉಪವ್ಯವಸ್ಥಾಪಕ ಮಹೇಶ್​ ಅವರಿಗೆ ಸೂಚಿಸಲಾಗಿದೆ. ಜತೆಗೆ ಕೆಎಂಎ್​, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಾಸಕರು ಹಾಗೂ ಸಂಸದರ ನಿಧಿಯಿಂದಲೂ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ತಿಮ್ಮಸಂದ್ರ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಡೇರಿಯೂ ಪ್ರಮುಖ ಪಾತ್ರವಹಿಸಬೇಕಾಗಿದೆ. ಗ್ರಾಮದಲ್ಲಿ ರಸ್ತೆ, ಸಮುದಾಯ ಭವನ, ದೇವಸ್ಥಾನ ದ ಜೀಣೋರ್ದ್ಧಾರದ ಕಾರ್ಯ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು.

ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು, ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಆರ್​.ಶ್ರೀನಿವಾಸ್​, ತಿಮ್ಮಸಂದ್ರ ಗ್ರಾಪಂ ಸದಸ್ಯ ಟಿ.ಎಂ.ಶ್ರೀನಿವಾಸ, ಸದಸ್ಯೆ ಟಿ.ಎಸ್​.ಆರತಿ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಆರ್​.ಮಹೇಶ್​, ವಿಸ್ತರಣಾಧಿಕಾರಿ ಎಸ್​.ನಾಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net