

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿದ್ದು, ಸರಣಿ ಭಾರತದ ಕೈತಪ್ಪುವ ಭೀತಿ ಎದುರಾಗಿದೆ. .301 ರನ್ಗಳ ಭರ್ಜರಿ ಲೀಡ್ ತೆಗೆದುಕೊಂಡಿರುವ ಪ್ರವಾಸಿ ತಂಡವು ಎರಡನೇ ಪಂದ್ಯದಲ್ಲೂ ತಮ್ಮ ಪಾರುಪಥ್ಯವನ್ನು ಮುಂದುವರೆಸಿದ್ದಾರೆ.
ಹಾಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ (Test Series) ಭಾರತದ ಪ್ರದರ್ಶನಕ್ಕೆ ಮಾಜಿ ಹಾಗೂ ಹಾಲಿ ಆಟಗಾರರು ಕಿಡಿಕಾರುತ್ತಿದ್ದು, ಮುಖ್ಯವಾಗಿ ಗೌತಮ್ ಗಂಭೀರ್ (Gautam Gambhir) ಹಾಗೂ ನಾಯಕ ರೋಹಿತ್ ಶರ್ಮ (Rohit Sharma) ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೀಗ ಟೀಮ್ ಇಂಡಿಯಾ (Team India) ನೀರಸ ಪ್ರದರ್ಶನಕ್ಕೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೈಮನ್ ಡೌಲ್ (Simon Doull) ಟೀಕಿಸಿದ್ದು, ಈ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಡೌಲ್, ಆಧುನಿಕ ಭಾರತ ಕ್ರಿಕೆಟ್ ತಂಡದ (Team India) ಆಟಗಾರರು ಸ್ಪಿನ್ ವಿರುದ್ಧ ಚೆನ್ನಾಗಿ ಆಡುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಪ್ರಪಂಚದಾದ್ಯಂತ ಹರಡಲಾಗಿದೆ. ಗಂಗೂಲಿ, ಗಂಭೀರ್, ಲಕ್ಷ್ಮಣ್ ಇದ್ದ ದಿನಗಳು ಕೆಳದು ಹೋಗಿವೆ. ದ್ರಾವಿಡ್ ಸ್ಪಿನ್ ವಿರುದ್ಧ ಚೆನ್ನಾಗಿ ಆಡುತ್ತಿದ್ದರು. ಆದರೆ, ಭಾರತ ತಂಡದಲ್ಲಿ ಈಗಿರುವ ಆಟಗಾರರು ಬಾಲ್ ಸ್ವಲ್ಪ ಟರ್ನ್ ಆದರೂ ಈ ಬಗ್ಗೆ ದೂರುತ್ತಾರೆ. ನನ್ನ ಪ್ರಕಾರ ಆ ದಿನಗಳು ಕಳೆದು ಹೋಗಿವೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೈಮನ್ ಡೌಲ್ ಹೇಳಿದ್ದಾರೆ.
ಟೆಸ್ಟ್ ಸರಣಿಯ (Test Series) ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮುಗ್ಗರಿಸಿದ್ದ ಭಾರತದ (Team India) ಬ್ಯಾಟರ್ಗಳು ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ್ದಾರೆ. ಪ್ರವಾಸಿ ತಂಡ ಗಳಿಸಿದ್ದ 259 ರನ್ ಎದುರು ಕೇವಲ 156 ರನ್ಗೆ ಸರ್ವಪತನಗೊಳ್ಳುವ ಮೂಲಕ 103 ರನ್ಗಳ ಹಿನ್ನಡೆ ಅನುಭವಿಸಿದ್ದಾರೆ. ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್ಗಳಲ್ಲಿ 1 ವಿಕೆಟ್ಗೆ 16 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಟಾಮ್ ಲೇಥಮ್ ಬಳಗದ ಸ್ಪಿನ್ ಖೆಡ್ಡಾಗೆ ಉರುಳಿತು. ಕೇವಲ 156 ರನ್ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ (19.3-1-53-7) ಗ್ಲೆನ್ ಫಿಲಿಪ್ಸ್ (6-0-26-2), ಟಿಮ್ ಸೌಥಿ (6-1-18-1) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೂರನೇ ದಿನದಾಟಕ್ಕೆ ಪಂದ್ಯ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.