ಗೃಹ ಸಚಿವ ಅಮಿತ್ ಷಾ ಸಮಾವೇಶಕ್ಕೂ ತಟ್ಟಿದ 'ಗೋಲಿ ಮಾರೋ' ಬಿಸಿ...ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು, ಘೋಷಣೆ ಕೂಗುತ್ತ ಸಾಗಿದ ಕಾರ್ಯಕರ್ತರು...

BJP Flag 1 March 20
Published on

ಕೋಲ್ಕತ್ತ: ಗೃಹ ಸಚಿವ ಅಮಿತ್ ಷಾ ಅವರ ಕೋಲ್ಕತ್ತ ಸಮಾವೇಶದಲ್ಲಿ ಪರವಾನಗಿ ಇರುವ ಗನ್​ ಹೊಂದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದಾಗ, ತಾನೊಬ್ಬ ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದ.

ಅದಾದ ಕೆಲವೇ ಕ್ಷಣಗಳಲ್ಲಿ ಕೆಲವರು ತಾವು ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡವರು ರ‍್ಯಾಲಿಯಲ್ಲಿ ಗೋಲಿ ಮಾರೋ..ಘೋಷಣೆ ಕೂಗಿದ್ದಾಗಿ ವರದಿಯಾಗಿದೆ.

ಅಮಿತ್​ ಷಾ ಅವರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಒಂದಷ್ಟು ಜನರ ಗುಂಪು ಹೀಗೆ ಗೋಲಿ ಮಾರೋ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಕೂಗುತ್ತ ಹೋಗಿದೆ. ಶಾಹಿದ್​ ಮಿನಾರ್​ ಮೈದಾನಕ್ಕೆ ತೆರಳುತ್ತಿದ್ದ ಈ ಗುಂಪಿನಲ್ಲಿದ್ದವರ ಕೈಯಲ್ಲಿ ಬಿಜೆಪಿ ಬಾವುಟವಿತ್ತು.

ಗೋಲಿಮಾರೋ ಎಂದು ಕೂಗಿದ್ದರ ಬಗ್ಗೆ ಕೋಲ್ಕತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯಾರೇ ಪ್ರಯತ್ನಿಸಿದರೂ ಅವರ ವಿರುದ್ಧ ಕಠಿಣ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.

ದೆಹಲಿ ಚುನಾವಣಾ ಪೂರ್ವ ಬಿಜೆಪಿ ಪ್ರಚಾರದ ವೇಳೆ ಈ ಗೋಲಿ ಮಾರೋ ಎಂಬ ಘೋಷಣೆ ತೀವ್ರ ವಿವಾದ ಸೃಷ್ಟಿಸಿತ್ತು. ಈಗ ಅಮಿತ್​ ಷಾ ಪಾಲ್ಗೊಂಡ ಸಮಾವೇಶದಲ್ಲೂ ಇದೇ ಘೋಷಣೆ ಮರುಕಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net