

ಸಾಮಾನ್ಯವಾಗಿ ಹುಲಿಗಳೆಂದರೆ ಎಲ್ಲರಿಗೂ ಭಯಮಿಶ್ರಿತ ಬೆರಗು ಇದ್ದೇ ಇರುತ್ತದೆ. ಅದರಲ್ಲೂ ಅಪರೂಪದ ಹುಲಿಗಳನ್ನು ಯಾರು ತಾನೇ ಮೆಚ್ಚಿಕೊಳ್ಳುವುದಿಲ್ಲ? ಕೆಲವೇ ದಿನಗಳ ಹಿಂದೆ ಕಬಿನಿ ಹಿನ್ನೀರಿನ ಬಳಿ ಕಾಣಲು ಸಿಕ್ಕಿದ ಕರಿಚಿರತೆ ಭಾರೀ ಸುದ್ದಿ ಮಾಡಿತ್ತು.
ಈಗ ಅಸ್ಸಾಂನ ಕಾಝೀರಂಗ ಅಭಯಾರಣ್ಯದಲ್ಲಿ ಸೆರೆಹಿಡಿಯಲಾದ ಅಪರೂಪದ ಗೋಲ್ಡನ್ ಟೈಗರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಯೂರೇಶ್ ಹೆಂದ್ರೆ ಎಂಬ ವನ್ಯಜೀವಿ ಛಾಯಾಗ್ರಾಹಕರು ಸೆರೆಹಿಡಿದ ಈ ಚಿತ್ರವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಇಂಥ ಹುಲಿ ಇದೊಂದೇ ಇರುವುದು ಎಂಬ ಮಾಹಿತಿಯನ್ನೂ ಅವರು ಉಲ್ಲೇಖಿಸಿದ್ದಾರೆ.