ಎಲ್ಲವೂ ಅವರಪ್ಪನಂತೆಯೇ ಇವೆ..! ಗೋಲ್ಡನ್​ ಲಾಬ್ರಡಾರ್​ ಮರಿಗಳು ಕಡುಕಪ್ಪು

labrador
Published on

ನವದೆಹಲಿ: ಮೂರು ವರ್ಷದ ಗೋಲ್ಡನ್​ ಲ್ಯಾಬ್ರಡಾರ್​ ನಾಯಿಯೊಂದು ಬರೋಬ್ಬರಿ 13 ಮರಿಗಳಿಗೆ ಜನ್ಮ ನೀಡಿದೆ. ತಾಯಿ ಬಂಗಾರ ಬಣ್ಣದ್ದಾದರೂ ಮರಿಗಳೆಲ್ಲ ಕಡುಕಪ್ಪು ಎಂಬುದು ವಿಶೇಷ.

ನಾಲ್ಕು ತಾಸುಗಳವರೆಗೆ ಒಂದಾದ ಮೇಲೋಂದರಂತೆ ಮರಿಗಳು ಬರುತ್ತವೆ ಇದ್ದವು ಎಂದು ನಾಯಿ ಒಡತಿ ಕ್ಯಾಥರೀನ್​ ಹೇಳಿದ್ದಾಳೆ. ನಾಲ್ಕರಿಂದ ಆರು ಮರಿಗಳು ಜನಿಸಬಹುದೆಂದು ನಿರೀಕ್ಷಿಸಿದ್ದೇವು. ಮೊದಲ 20 ನಿಮಿಷಗಳಲ್ಲಿ ನಾಲ್ಕು ಮರಿಗಳು ಬಂದವು ಬಳಿಕ ಸುದೀರ್ಘ ನಾಲ್ಕು ತಾಸುಗಳವರೆಗೆ ಮರಿಗಳು ಬರುತ್ತಲೇ ಇದ್ದವು.

ಕೆಲ ತಿಂಗಳ ಹಿಂದಷ್ಟೇ ಕ್ಯಾಥರಿನ್​ ಸ್ನೇಹಿತರೊಬ್ಬರು ಸಾಕಿದ್ದ ಕಪ್ಪು ಲ್ಯಾಬ್ರಡಾರ್​ ಜತೆ ಲೂಸಿಯ ಮಿಲನ ಮಹೋತ್ಸವ ನಡೆದಿತ್ತು. ಈ ಕಾರಣದಿಂದಾಗಿ ಹುಟ್ಟಿದ ಎಲ್ಲ ಮರಿಗಳು ಕಡುಕಪ್ಪು ಬಣ್ಣ ಹೊಂದಿವೆ.

ಈ ಹಿಂದೆ ಮೇ ತಿಂಗಳಲ್ಲಿ ಲ್ಯಾಬ್ರಡಾರ್​ ನಾಯಿ 14 ಮರಿಗಳಿಗೆ ಜನ್ಮನೀಡಿದ್ದು, ಈವರೆಗಿನ ದಾಖಲೆಯಾಗಿದೆ. ಇದಕ್ಕೂ ಮುನ್ನ ಡಾಲ್ಮೇಷಿಯನ್​ ನಾಯಿ ಬರೋಬ್ಬರಿ 18 ಮರಿಗಳನ್ನು ಹಾಕಿತ್ತು.

ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಎನ್ನುವಂತೆ ನಿಯೋಪಾಲಿಟನ್​ ಮ್ಯಾಸ್ಟಿಫ್​ ನಾಯಿಯೊಂದು 21 ಮರಿಗಳನ್ನು ಹಾಕಿದ್ದು ಈವರೆಗಿನ ದಾಖಲೆಯಾಗಿದೆ. ಜಾಗತಿಕ ಮಟ್ಟದ ದಾಖಲೆ ಎಂದರೆ ನಿಯೋಪಾಲಿಟನ್​ ಮ್ಯಾಸ್ಟಿಫ್​ ಇಂಗ್ಲೆಂಡ್​ನಲ್ಲಿ 24 ಮರಿಗಳಿಗೆ ಜನ್ಮ ನೀಡಿತ್ತು. ಇದಕ್ಕೂ ಮುನ್ನ ಗ್ರೇಟ್​ ಡೆನ್​ ನಾಯಿ 21 ಮರಿ ಹಾಕಿದ್ದ ದಾಖಲೆಯನ್ನು ಇದು ಮುರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net