ಗೋಲ್ಡನ್ ಬಾಬಾ: 6 ಕೆಜಿ ಚಿನ್ನಾಭರಣ ಧರಿಸಿದ ಭಕ್ತರ ಗಮನ ಸೆಳೆದ Golden Baba..

Golden Baba
Published on

Golden Baba:  ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಗೋಲ್ಡನ್ ಬಾಬಾ 6 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಝೇಂಕರಿಸುತ್ತಿದ್ದಾರೆ.  ಇವರು ವಿಶೇಷ ಆಕರ್ಷಣೆಯಾಗಿ ನಿಂತಿದ್ದಾರೆ.

ಗೋಲ್ಡನ್ ಬಾಬಾ ಆಭರಣಗಳು ರುದ್ರಾಕ್ಷಿಗಳು, ಹವಳಗಳು, ಕೆಂಪು ಹವಳಗಳು, ಮಾಣಿಕ್ಯಗಳು, ನೀಲಮಣಿಗಳು ಮತ್ತು ಪಚ್ಚೆಗಳಿಂದ ಕೂಡಿದೆ. ಕೇರಳದ 'ಗೋಲ್ಡನ್ ಬಾಬಾ' ಅವರ ಪೂರ್ಣ ಹೆಸರು 1008 ನೇ ಅನಂತ ಶ್ರೀ ವಿಭೂಷಿತ್ ಸ್ವಾಮಿ ನಾರಾಯಣಾನಂದ ಗಿರಿ ಮಹಾರಾಜ್.

ಮಹಾಕುಂಭ ಮೇಳದಲ್ಲಿ ಗೋಲ್ಡನ್ ಬಾಬಾ

ಗೋಲ್ಡನ್ ಬಾಬಾ ಮಾತನಾಡಿ,   ನಾನು ಈ ಆಭರಣಗಳನ್ನು ದೇವರ ಸಂಕೇತವಾಗಿ ಧರಿಸುತ್ತೇನೆ. ನಟರಾಜ ಸ್ವಾಮಿ, ನರಸಿಂಹ ಸ್ವಾಮಿ, ಮುರುಗನ್ ಸ್ವಾಮಿ, ಭದ್ರಕಾಳಿ ಸ್ವಾಮಿ ಮುಂತಾದವರ ಪ್ರತೀಕವಾಗಿ ಇವುಗಳನ್ನು ಕೊರಳಿಗೆ ಧರಿಸುತ್ತೇನೆ. ನಾನು ಅವರಿಂದ ಸಕಾರಾತ್ಮಕ ಶಕ್ತಿಯನ್ನು ಪಡೆಯುತ್ತೇನೆ ಎಂದಿದ್ದಾರೆ.

ನನ್ನ ಆಭರಣಗಳು ರುದ್ರಾಕ್ಷಿಗಳು, ಹವಳಗಳು, ಕೆಂಪು ಹವಳಗಳು, ಮಾಣಿಕ್ಯಗಳು, ನೀಲಮಣಿಗಳು ಮತ್ತು ಪಚ್ಚೆಗಳಿಂದ ಕೂಡಿದೆ. ಅವುಗಳನ್ನು ದೇವತಾರಾಧನೆಯಲ್ಲಿಯೂ ಬಳಸಲಾಗುತ್ತದೆ. ಅದಕ್ಕೇ ಅವು ಪವಿತ್ರ ಎಂದು ತಿಳಿಸಿದ್ದಾರೆ.

ನಾನು ಕೇರಳದಲ್ಲಿ ವಾಸವಾಗಿದ್ದೇನೆ. ನಾನು ಆ ರಾಜ್ಯದಲ್ಲಿ ಸನಾತನ ಧರ್ಮ ಪ್ರತಿಷ್ಠಾನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಪ್ರತಿ ಕುಂಭ ಮೇಳಕ್ಕೂ ಪ್ರಯಾಗರಾಜ್‌ಗೆ ಬರುತ್ತೇನೆಂದಿದ್ದಾರೆ.

ಇಂದು (ಶನಿವಾರ) ನಡೆದ ಮಹಾಕುಂಭ ಮೇಳದಲ್ಲಿ ಸುಮಾರು 19.8 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದರು. ಈ ಕುಂಭಮೇಳ ಆರಂಭವಾದಾಗಿನಿಂದ ಶುಕ್ರವಾರದವರೆಗೆ ಸುಮಾರು 7.3 ಕೋಟಿ ಭಕ್ತರು ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net