

ನವದೆಹಲಿ: ಸ್ಥಳೀಯ ಮಾರು ಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 200 ರೂ. ಕಡಿಮೆಯಾಗಿದೆ.
ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ ಸೋಮವಾರ 91,450 ರೂ. ಇದ್ದದ್ದು ಮಂಗಳವಾರ 91,250 ರೂ.ಗೆ ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 91 ಸಾವಿರ ರೂ. ಇದ್ದದ್ದು 90,800 ರೂ.ಗೆ ಇಳಿದಿದೆ. ಆದರೆ ಬೆಳ್ಳಿಯ ದರ 200 ರೂ. ಏರಿಕೆಯಾಗಿದೆ.
ಸೋಮವಾರ ಕೆಜಿಗೆ 92,500 ರೂ. ಇದ್ದದ್ದು ಮಂಗಳವಾರ 92,700 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.