ಇದೇ Bigg BOss ಮನೆಯಿಂದ ಹೊರ ಬರಲು ಕಾರಣ! ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ: ಗೋಲ್ಡ್‌ ಸುರೇಶ್

BBK11
Published on

ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ. ನಿರಾಸೆ ಆಗಿದ್ರೆ ಕ್ಷಮಿಸಿ: ಗೋಲ್ಡ್​ ಸುರೇಶ್

Bigg BOss: ಬಿಗ್​ಬಾಸ್​​ ಮನೆಯಿಂದ ದಿಢೀರ್​ ಎಂದು ಹೊರ ಬಂದಿರುವ ಗೋಲ್ಡ್​ ಸುರೇಶ್​​ . ಇವರು ಅರ್ಧದಲ್ಲಿಲೇ ತಮ್ಮ ದೊಡ್ಡಮನೆ ಜರ್ನಿಯನ್ನು ಎಂಡ್​​ ಮಾಡಿ ಬಂದಿರುವ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಾಲ ಬಾಧೆ, ಸುರೇಶ್​ ಅವರ ತಂದೆ ಆರೋಗ್ಯ ಹದಗೆಟ್ಟಿಗೆ ಎನ್ನುವ ಸುದ್ದಿ ಹಬ್ಬಿತ್ತು. ಈ ಕುರಿತಾಗಿ ಗೋಲ್ಡ್​ ಸುರೇಶ್​​ ಅವರೇ ಈಗ ಸ್ಪಷ್ಟನೆ ನೀಡಿದ್ದಾರೆ.

‘ಬಿಗ್ ಬಾಸ್​ನಿಂದ ಆಫರ್ ಬಂದಾಗ ಶಾಕ್ ಹಾಗೂ ಖುಷಿ ಎರಡೂ ಆಯಿತು. ಎಲ್ಲೋ ಇದ್ದವನನ್ನು ಗುರುತಿಸಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗಿ ಸುಮಾರು ದಿನ ಆಡಿ ಬಂದಿದ್ದೇನೆ’ ಎಂದಿದ್ದಾರೆ  ಗೋಲ್ಡ್ ಸುರೇಶ್.

‘ನಾನು ಹೊರಗೆ ಬಿಸ್ನೆಸ್ ಹ್ಯಾಂಡಲ್ ಮಾಡ್ತಾ ಇದ್ದೆ. ಅದನ್ನು ನಾನೇ ನೋಡಿಕೊಳ್ಳುತ್ತಾ ಇದ್ದೆ. ನಾನು ಬಿಗ್ ಬಾಸ್​ಗೆ ಹೋಗುವಾಗ ಅದನ್ನು ಪತ್ನಿಗೆ ವಹಿಸಿ ಬಂದಿದ್ದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಅವರಿಗೆ ಆಗಿಲ್ಲ.  ನಿರ್ಧಾರ ತಗೊಳ್ಳುವಾಗ ಎಡವುತ್ತೇನೋ ಎನ್ನುವ ಭಯ ಇತ್ತು. ಹೀಗಾಗಿ ನಾನು ಹೊರ ಬಂದೆ. ನಾನು ಹೊರಗೆ ಪತ್ನಿಗೆ ಸಹಾಯ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಬಿಗ್ ಬಾಸ್ ಮನೆ ಎಷ್ಟು ಮುಖ್ಯವೋ ಹೊರಗಿರುವ ಉದ್ಯಮ ಕೂಡ ಅಷ್ಟೇ ಮುಖ್ಯ’ ಎಂದಿದ್ದಾರೆ .

ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಸುದ್ದಿ ಮಾಡುವವರು ಮಾಡಲಿ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ. ನನಗೆ ಅಷ್ಟು ಸಾಕು. ಎಲ್ಲರಿಗೂ ಥ್ಯಾಂಕ್ಸ್. ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ. ನಿರಾಸೆ ಆಗಿದ್ರೆ ಕ್ಷಮಿಸಿ’ ಎಂದಿದ್ದಾರೆ ಸುರೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net