BBK11: ಎಲಿಮಿನೇಷನ್​ ಪ್ರಕ್ರಿಯೆಗೂ ಮುನ್ನವೇ 'ಬಿಗ್' ಮನೆಯಿಂದ ಗೋಲ್ಡ್​ ಸುರೇಶ್​ ಹೊರಗೆ!

ವಿಜಯವಾಣಿ - 2024-12-15T164831.609
Published on

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್ ಬಾಸ್​ ಸೀಸನ್​ 11ರಲ್ಲಿ (BBK11) ಕಳೆದ ವಾರ ಯಾರೊಬ್ಬರು ಸಹ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಲಿಲ್ಲ. ಆದರೆ, ಈ ವಾರ ಕೊಂಚ ಆಟದ ಗತ್ತು, ಗಮ್ಮತ್ತು ಬೇರೆ ಹಾದಿಯನ್ನೇ ಹಿಡಿದಿದ್ದು, ನೋಡುಗರಿಗೆ ಹಲವು ಅಭಿಪ್ರಾಯಗಳನ್ನು ನೀಡಿದೆ. ಇನ್ನು ಭಾನುವಾರದ ಸಂಚಿಕೆಯಲ್ಲಿ ಇಬ್ಬರು ಹೊರಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಊಹಿಸಿದ್ದ ವೀಕ್ಷಕರಿಗೆ ಇದೀಗ ಗೋಲ್ಡ್​ ಸುರೇಶ್ ಅವರ ದಿಢೀರ್​ ಹೊರಬರುವಿಕೆ ವೀಕ್ಷಕರಲ್ಲಿ ಹಾಗೂ ಮನೆಯ ಸದಸ್ಯರಲ್ಲಿ ಭಾರೀ​ ಅಚ್ಚರಿ ಉಂಟುಮಾಡಿದೆ.

ಈ ವಾರ ಯಾರು ಮನೆಯಿಂದ ಹೊರ ಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದ ವೀಕ್ಷಕರಿಗೆ ಇದೀಗ ಗೋಲ್ಡ್​ ಸುರೇಶ್​ ಅವರ ದಿಢೀರ್​ ನಿರ್ಗಮನ ಅಚ್ಚರಿ ಮೂಡಿಸಿದೆ. ಬಿಗ್​ ಬಾಸ್ ಹೇಳಿದ ಪ್ರಕಾರ, ಸುರೇಶ್​ ಅವರ ಅವಶ್ಯಕತೆ ಬಿಗ್ ಬಾಸ್​ ಮನೆಗಿಂತಲೂ ತಮ್ಮ ಕುಟುಂಬಕ್ಕೆ ಹೆಚ್ಚಿದೆ ಎಂಬ ಮಾತುಗಳು ಮನೆಯವರ ಕಣ್ಣಂಚಲ್ಲಿ ನೀರು ತಂದಿತು. ಈ ಮಾತುಗಳು ಕೇಳಿದ ಕೂಡಲೇ ಸುರೇಶ್​ ತಮ್ಮ ಲಗೇಜ್​ ಜತೆಗೆ ಬಿಗ್ ಮನೆಯಿಂದ ಹೊರಬಂದಿದ್ದಾರೆ.

ಇದೀಗ ಗೋಲ್ಡ್​ ಸುರೇಶ್ ಹೊರಬಂದಿರುವುದು ಒಂದೆಡೆಯಾದರೆ, ಭಾನುವಾರದ ಸೂಪರ್ ಸಂಡೆ ವಿತ್ ಬಾದ್​ಷಾ ಸುದೀಪ ಸಂಚಿಕೆಯಲ್ಲಿ ಯಾರು ಹೊರಬರಲಿದ್ದಾರೆ? ಯಾರಿಗೆ ಮನೆಯಿಂದ ಗೇಟ್​ಪಾಸ್​? ಎಂಬುದನ್ನು ಇಂದಿನ ಸಂಚಿಕೆಯ ಕೊನೆಯಲ್ಲಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net